ಬಾಗಲಕೋಟೆ: ಪತ್ರಕರ್ತರ ವಿರುದ್ಧ ಸುಳ್ಳು ಆರೋಪದಡಿ ಖಾಸಗಿ ದೂರು ದಾಖಲಿಸಿದ್ದ ವ್ಯಕ್ತಿಗೆ ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯವು ₹50 ಸಾವಿರ ದಂಡ ವಿಧಿಸಿದೆ.

ಯೂಟ್ಯೂಬ್ ಚಾನಲ್ವೊಂದರ ಪ್ರತಿನಿಧಿ ಎಂದು ಹೇಳಿಕೊಂಡಿದ್ದ ಬಸನಗೌಡ ಪಾಟೀಲ ಎಂಬುವವರು ಬಿಟಿಡಿಎ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ ತಾನು ವಿಡಿಯೊ ಮಾಡುವುದನ್ನು ತಡೆದಿದ್ದಲ್ಲದೇ, ಹಲ್ಲೆ ಮಾಡಲು ಮಾರಕಾಸ್ತ್ರಗಳೊಂದಿಗೆ ಬಂದಿದ್ದರು ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುರಾವೆ ಇಲ್ಲದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದಾಗ ನೇರವಾಗಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ದೂರುದಾರ ಬಸನಗೌಡ ಪಾಟೀಲ ಆರೋಪಿಸಿದಂತೆ ಯಾವುದೇ ಘಟನೆ ಜರುಗಿಲ್ಲ ಎಂದು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ಪಾಟೀಲ ಅವರು, ಪೊಲೀಸರು ಸಲ್ಲಿಸಿದ ಬಿ-ರಿಪೋರ್ಟ್ ಅಂಗೀಕರಿಸಿ, ದೂರುದಾರ ಪಾಟೀಲ ಸಲ್ಲಿಸಿದ್ದ ಖಾಸಗಿ ದೂರನ್ನು ತಿರಸ್ಕರಿಸಿದ್ದಾರೆ. ₹50 ಸಾವಿರ ದಂಡ ವಿಧಿಸಿ 30 ದಿನದೊಳಗಾಗಿ ದಂಡ ಪಾವತಿಸಲು ಆದೇಶಿಸಿದ್ದಾರೆ.

ಪತ್ರಕರ್ತರಾದ ಸಂತೋಷ ದೇಶಪಾಂಡೆ, ಅನಿರುದ್ಧ ಗಲಗಲಿ, ಆನಂದ ದಲಭಂಜನ, ಶಂಕರ ಕಲ್ಯಾಣಿ, ಮಹೇಶ ಅಂಗಡಿ ಹಾಗೂ ದಿವಂಗತ ರಾಮ ಮನಗೊಳಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ವಕೀಲ ವಿಜಯ ಬರಗುಂಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.