ಬಾದಾಮಿ: ಸಮೀಪದ ನಂದಿಕೇಶ್ವರ ಗ್ರಾಮದ ಹೊರವಲಯದ ಆಶ್ರಯ ಕಾಲೊನಿಯಲ್ಲಿ ಭಾನುವಾರ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಮನೆ ಸಂಪೂರ್ಣ ಕುಸಿದು ಮನೆಯಲ್ಲಿನ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.
ಗ್ರಾಮದ ನಿವಾಸಿ ಮಂಜುನಾಥ ನಂದಿಕೇಶ್ವರ (28) ಮೃತ ವ್ಯಕ್ತಿ. ಮನೆಯಲ್ಲಿ ಒಬ್ಬರೇ ಇದ್ದು ರಾತ್ರಿ ಸಮಯದಲ್ಲಿ ಅಡುಗೆ ಮಾಡುವಾಗ ಸ್ಫೋಟವಾಗಿರಬಹುದೆಂದು ಪೋಲಿಸರು ಶಂಕಿಸಿದ್ದಾರೆ.
ಪತ್ನಿ, ತಾಯಿ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ. ಭಟ್ಕಳಕ್ಕೆ ದುಡಿಯಲು ಹೋಗಿದ್ದರೆಂದು ತಿಳಿದಿದೆ. ಮೃತನ ಶವ ಪರೀಕ್ಷೆಗೆ ಬಾದಾಮಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಆಟೋ-ಬಸ್ ಡಿಕ್ಕಿ: ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಸತ್ತಿರುವ ಮೃತನ ಶವವನ್ನು ವೀಕ್ಷಿಸಲು ಆಸ್ಪತ್ರೆಗೆ ತಾಯಿ ಮತ್ತು ಸಹೋದರಿಯರು ನಂದಿಕೇಶ್ವರ ಗ್ರಾಮದಿಂದ ಬಾದಾಮಿಗೆ ಆಟೋದಲ್ಲಿ ಪ್ರಯಾಣಿಸುವಾಗ ಸೋಮವಾರ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ಸು ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.
ಸಹೋದರಿಯ ಕೈಗೆ ಗಾಯವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಎಸ್ಐ ನಿಂಗಪ್ಪ ಪೂಜೇರಿ ಹೇಳಿದರು. ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.