ಬಾಗಲಕೋಟೆ: ನವನಗರದಲ್ಲಿರುವ ದಿಗಂಬರೇಶ್ವರ ಮಠದ ರಥೋತ್ಸವವು ಬುಧವಾರ ಅದ್ದೂರಿಯಾಗಿ ಜರುಗಿತು.

ಮಠದ ಮುಂಭಾಗವಿರುವ ಕೆಂಪು ರಸ್ತೆಯಲ್ಲಿ ರಥೋತ್ಸವ ಜರುಗಿತು. ಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಪುನೀತರಾದರು. ಸಂಜೆ 5ಕ್ಕೆ ದಿಗಂಬರೇಶ್ವರ, ಶ್ರೀಮಾತಾ ಕಪ್ಪರ ಪಡಿಯಮ್ಮನವರ ಉತ್ಸವ ಮೂರ್ತಿಗಳಿಗೆ, ತೇರಿನ ಕಳಸಕ್ಕೆ ಪೂಜೆ ಸಲ್ಲಿಸಿ, ತೇರಿನ ಕಳಸದ ಪ್ರತಿಷ್ಠಾಪನೆಯೊಂದಿಗೆ 11ನೇ ವರ್ಷದ ರಥೋತ್ಸವ ಜರುಗಿತು.

ಬಸವರಾಜಪ್ಪನವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳಗಿ ತಾಲ್ಲೂಕಿನ ನಾಗರಾಳದ ಶ್ರೀಶೇಷಪ್ಪಯ್ಯ ಸ್ವಾಮೀಜಿ ಭಾಗಿಯಾಗಿದ್ದರು.

ಬಸಪ್ಪಜ್ಜನವರ ಕುರಿತು ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಕಲಾವಿದರಾದ ವಿನಾಯಕ ದಂಡಗಿ, ರಾಜೇಶ್ವರಿ ದೇಶಪಾಂಡೆ, ಹಣಮಂತ ಪತ್ತಾರ, ರಾಘವೇಂದ್ರ ಪವಾರ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-19-795067947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.