ಬಾಗಲಕೋಟೆ: ‘ಬಾಗಲಕೋಟೆಯ ಮುಗ್ಧ ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸಿ, ಸರ್ಕಾರದಿಂದ ಕೋಟ್ಯಂತರ ರೂಪಾಯಿ ಪರಿಹಾರ ಪಡೆಯುವ ಮೂಲಕ ಇಲ್ಲಿನ ಭ್ರಷ್ಟ ರಾಜಕಾರಣಿಗಳು ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪ ಮಾಡಿದರು.

ಬಾಗಲಕೋಟೆಯ ವಲ್ಲಭಭಾಯಿ ಚೌಕ್ನಲ್ಲಿ ಸೋಮವಾರ ಕೆಆರ್ಎಸ್ ಪಕ್ಷದ ಅಭ್ಯರ್ಥಿ ನಾಗರಾಜ ಕಲಕುಟಗರ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸ ಆಗುತ್ತಿಲ್ಲ’ ಎಂದರು.

‘ನವನಗರ ಕೇವಲ ಕಾಂಕ್ರೀಟ್ ಕಾಡಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಬಾಗಲಕೋಟೆಯನ್ನು ಮಾದರಿ ನಗರ ಮಾಡುತ್ತೇವೆ ಎಂದು ಹೇಳಿದವರು ಹಣ ಲೂಟಿ ಮಾಡಿದ್ದೇ ಸಾಧನೆಯಾಗಿದೆ’ ಎಂದು ಹೇಳಿದರು.

‘ಆಲಮಟ್ಟಿ ಜಲಾಶಯದ ಗೇಟ್ ಎತ್ತರಿಸುವ ವಿಚಾರದಲ್ಲಿ ರಾಜಕಾರಣಿಗಳು ಕೇವಲ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಇಂದಿಗೂ ವೈಜ್ಞಾನಿಕ ಪರಿಹಾರ ಸಿಕ್ಕಿಲ್ಲ. ಸಂತ್ರಸ್ತರಿಗಾಗಿ ಮೀಸಲಿಟ್ಟ ಪುನರ್ವಸತಿ ಕೇಂದ್ರಗಳು ಮೂಲಸೌಕರ್ಯಗಳಿಲ್ಲದೇ ಸ್ಮಶಾನಗಳಂತಾಗಿವೆ’ ಎಂದು ಟೀಕಿಸಿದರು.

‘ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ನೀಡಬಲ್ಲ ಕೈಗಾರಿಕೆಗಳ ಸ್ಥಾಪನೆಯಾಗಿಲ್ಲ. ಕೇವಲ ಸಕ್ಕರೆ ಕಾರ್ಖಾನೆಗಳಿದ್ದು, ರೈತರಿಗೆ ಸಕಾಲಕ್ಕೆ ಬಾಕಿ ಹಣ ನೀಡದೇ ಪೀಡಿಸುತ್ತಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕಾರಣವನ್ನು ಕುಟುಂಬದ ಸ್ವತ್ತಾಗಿಸಿಕೊಂಡಿವೆ. ವಂಶಪಾರಂಪರ್ಯ ರಾಜಕಾರಣಕ್ಕೆ ಕೊನೆ ಹಾಡಿ. ನಾಗರಾಜ ಅವರಿಗೆ ಮತ ನೀಡಿ’ ಎಂದು ಮನವಿ ಮಾಡಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಸಿ.ಎನ್., ರಾಜ್ಯ ಕಾರ್ಯದರ್ಶಿ ವಿಜಯಕುಮಾರ, ಸುಂದರ, ಎಲ್. ಜೀವನ್, ಕೃಷ್ಣ ವಿ.ಬಿ, ವೀರಭದ್ರಪ್ಪ, ಗಣಪತಿ ರಾಥೋಡ್, ಆನಂದ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-19-227242628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.