ಬಾಗಲಕೋಟೆ: ಅಕ್ರಮ ಮರಳು ಗಣಿಗಾರಿಕೆ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಬಂದ ಸರಣಿ ವರದಿ, ಕೆಲ ತಿಂಗಳುಗಳ ಹಿಂದೆ ಲೋಕಾಯುಕ್ತರ ದಾಳಿ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ಬಾಗಲಕೊಟೆ ಜಿಲ್ಲೆಯ ಆಡಳಿತದ ವೈಫಲ್ಯ ಬಟಾ ಬಯಲಾಗಿದೆ.

ಜಿಲ್ಲೆಯಲ್ಲಿರುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ಹಾಗೂ ದೊಡ್ಡ ಹಳ್ಳಗಳಲ್ಲಿ ಅಕ್ರಮ ಗಣಿಗಾರಿಕೆ ಹಲವಾರು ವರ್ಷ ಗಳಿಂದ ನಡೆದುಕೊಂಡೇ ಬಂದಿದೆ. ‘ಅಕ್ರಮ ಮರಳು ಗಣಿಗಾರಿಕೆ ಮಾಡು ವವರು ಕಂದಾಯ, ಪೊಲೀಸ್, ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಅವರ ವಿರುದ್ಧ ಯಾವುದೇ ಕ್ರಮಗಳಾಗು ವುದಿಲ್ಲ. ಲೋಕಾಯುಕ್ತ ಅಧಿಕಾರಿಗಳಿಗೆ ಕಂಡದ್ದು, ಇಲ್ಲಿನ ಅಧಿಕಾರಿಗಳಿಗೇಕೆ ಕಾಣುವುದಿಲ್ಲ’ ಎಂಬುದು ಸಾರ್ವಜನಿಕರ ದೂರು.

ಮೂರು ನದಿಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ನದಿಗಳಲ್ಲಿ ದೋಣಿಗಳನ್ನು ಬಳಸಿ ಮರಳು ಗಣಿಗಾರಿಕೆ ಮಾಡಬಾ ರದು ಎಂದಿದ್ದರೂ, ಅಧಿಕೃತವಾಗಿರುವವರೂ ನಿಯಮಗಳ ಉಲ್ಲಂಘನೆ ಮಾಡಿ ಗಣಿಗಾರಿಕೆ ಮಾಡುತ್ತಾರೆ.

ಪ್ರತಿ ವರ್ಷ ನದಿಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ಅಕ್ರಮ ಮರಳು ದಂಧೆಕೋರರು ನದಿಗಳ ಒಡಲು ಬಗೆಯುವ ಕಾರ್ಯ ಆರಂಭಿಸುತ್ತಾರೆ.

ಹಗಲು ಹೊತ್ತಿನಲ್ಲಿ ನದಿಗಳಿಂದ ಮರ ಳನ್ನು ಹೊರ ತೆಗೆಯಲಾಗುತ್ತದೆ. ಕೆಲವು ಕಡೆಗಳಲ್ಲಿ ಹಗಲು ಹೊತ್ತೇ ಸಾಗಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ರಾತ್ರಿ ವೇಳೆಯಲ್ಲಿ ಮರಳು ಸಾಗಿಸಲಾಗುತ್ತದೆ.

ಪ್ರಶ್ನಿಸುವವರ ಮೇಲೆಯೇ ದಬ್ಬಾಳಿಕೆ: ನದಿ, ಹಳ್ಳ, ಹೊಲಗಳಲ್ಲಿ ಸೇರಿದಂತೆ ಎಲ್ಲಿಯೇ ಮರಳು ಸಿಗುತ್ತದೆ ಎಂಬುದು ಗೊತ್ತಾದರೆ ಸಾಕು ದಂಧೆಕೋರರು ದಂಡು ಅಲ್ಲಿಗೇ ಬಂದೇ ಬಿಡುತ್ತದೆ. ಯಾವುದೇ ಪರವಾನಗಿ ಪಡೆಯದೇ ಮರಳು ಗಣಿಗಾರಿಕೆ ಆರಂಭಿಸಿಯೇ ಬಿಡುತ್ತಾರೆ.

ರೈತರ ಹೊಲಗಳಲ್ಲಿಯೂ ವಾಹನಗಳು ಸಂಚರಿಸಲು ದಾರಿ ಮಾಡಿಕೊಳ್ಳುತ್ತಾರೆ. ಹೊಲದವರು ಪ್ರಶ್ನೆ ಮಾಡಿದರೆ ಅವರ ವಿರುದ್ಧವೇ ದಬ್ಬಾಳಿಕೆ ಮಾಡುತ್ತಾರೆ. ರಾಜಕಾರಣಿಗಳಿಂದಲೂ ಒತ್ತಡ ಹಾಕಿಸುತ್ತಾರೆ.

ಪರಿಸರ ಕಾಯ್ದೆ ಉಲ್ಲಂಘನೆ ಪತ್ತೆ: ದೋಣಿಗಳನ್ನು, ಬೃಹತ್ ಯಂತ್ರ ಗಳನ್ನು ಬಳಸಿ ಮರಳು ಗಣಿಗಾರಿಕೆಯನ್ನು ಪರ ವಾನಗಿ ಪಡೆದವರೂ ಮಾಡು ವಂತಿಲ್ಲ. ಆದರೆ, ದಾಳಿಯ ವೇಳೆ 14 ಯಾಂತ್ರೀಕೃತ ದೋಣಿಗಳು ಪತ್ತೆಯಾಗಿವೆ.

ಪರಿಶೀಲಿಸದ ಅಧಿಕಾರಿಗಳು: ನದಿ ದಡಗಳಿಗೆ ಹೋಗಿ ಅಧಿಕಾರಿಗಳು ಅನುಮತಿ ಪಡೆದಷ್ಟೇ ಜಾಗದಲ್ಲಿ, ಅನುಮತಿ ಷರತ್ತಿನ ಪ್ರಕಾರ ಮರಳು ಗಣಿಗಾರಿಕೆ ನಡೆಯುತ್ತಿದೆಯೇ?

ಅಕ್ರಮವಾಗಿ ಯಾರಾದರೂ ಗಣಿಗಾರಿಕೆ ನಡೆಸುತ್ತಿದ್ದಾರೆಯೇ ಎಂಬು ದನ್ನು ಪರಿಶೀಲಿಸುವ ಗೋಜಿಗೇ ಹೋಗುವುದೇ ಇಲ್ಲ ಎನ್ನುವುದು ಲೋಕಾಯುಕ್ತ ದಾಳಿ ವೇಳೆ ಕಂಡು ಬಂದಿರುವ ಅಕ್ರಮಗಳನ್ನು ನೋಡಿದರೆ ಗೊತ್ತಾಗುತ್ತದೆ.

ಅಧಿಕಾರಿಗಳ ವಿರುದ್ಧ ಸ್ವಯಂ ದೂರು

ಬಾಗಲಕೋಟೆ: ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ ಜಿಲ್ಲೆಯ 24 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ, ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ, ಬಾಗಲಕೋಟೆಯ ಉಪನಿರ್ದೇಶಕ, ಜಿಲ್ಲಾಧಿಕಾರಿ, ಐವರು ತಹಶೀಲ್ದಾರ್ಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.

ಗಣಿಗಾರಿಕೆ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ವರದಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ.

ಜಿಲ್ಲೆಯಾದ್ಯಂತ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ಪ್ರಾಥಮಿಕವಾಗಿ ಗುರುತಿಸಲ್ಪಟ್ಟಿದ್ದು, ಮುಂದಿನ ತನಿಖೆ ನಂತರ ತಪ್ಪಿತಸ್ಥ ಅಧಿಕಾರಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.