ಜಮಖಂಡಿ (ಬಾಗಲಕೋಟೆ ಜಿಲ್ಲೆ): ಶತಾಯುಷಿ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಗಳೂ ತಾಯಿಯೊಡನೆ ಜೀವನ ಯಾತ್ರೆ ಮುಗಿಸಿದ ಘಟನೆ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ಈಚೆಗೆ ನಡೆದಿದೆ.

ತೊದಲಬಾಗಿ ಗ್ರಾಮದ ಶತಾಯುಷಿ ಗಂಗವ್ವ ಚೆನ್ನಬಸಪ್ಪ ಪಾರ್ಥನಳ್ಳಿ (101) ನಿಧನರಾಗಿದ್ದರು. ಅವರಿಗೆ ಐವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಅಥಣಿ ತಾಲ್ಲೂಕಿನ ಪಾರ್ಥನಳ್ಳಿ ಗ್ರಾಮದ ನಿವಾಸಿಯಾಗಿದ್ದ ಇವರ ಎರಡನೇ ಪುತ್ರಿ ಹಣಮವ್ವ ಮಜಗುಣಿ (75) ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಸಂದರ್ಭದಲ್ಲಿ ತಾಯಿ ಶವದ ಮುಂದೆ ಕುಳಿತು ದುಖದಲ್ಲಿದ್ದಾಗ ಅಸ್ವಸ್ಥಗೊಂಡು ಹೃದಯಾಘಾತದಿಂದ ನಿಧನ ಹೊಂದಿದರು. ಇವರಿಗೆ ಮೂವರು ಪುತ್ರರು ಇದ್ದಾರೆ.

ಶತಾಯುಷಿ ಗಂಗವ್ವ ಅವರ ಅಂತ್ಯಸಂಸ್ಕಾರ ತೊದಲಬಾಗಿ ಗ್ರಾಮದಲ್ಲಿ ನಡೆಯಿತು. ಇವರ ಪುತ್ರಿ ಹಣಮವ್ವ ಅವರ ಅಂತ್ಯಸಂಸ್ಕಾರ ಅಥಣಿ ತಾಲ್ಲೂಕಿನ ಪಾರ್ಥನಳ್ಳಿಯಲ್ಲಿ ನಡೆಯಿತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-19-1244897881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.