ರಾಂಪುರ: ಮಹಿಳೆಯರು ಹಾಗೂ ಶಾಲಾ ಮಕ್ಕಳ ಮೇಲೆ ದಾಳಿ ಮಾಡಿ ಆತಂಕಗೊಳಿಸಿದ್ದ ಮಂಗವೊಂದನ್ನು ಗುರುವಾರ ಸೆರೆ ಹಿಡಿಯಲಾಗಿದ್ದು, ಜನರಲ್ಲಿ ಭಯ ದೂರವಾದಂತಾಗಿದೆ.

ಬಾಗಲಕೋಟೆ ತಾಲ್ಲೂಕಿನ ಜಡ್ರಾಮಕುಂಟಿ ಗ್ರಾಮದಲ್ಲಿ 2-3 ತಿಂಗಳಿಂದ ಹೆಣ್ಣು ಮಂಗವೊಂದು ಜನರಿಗೆ ಕಿರುಕುಳ ನೀಡುತ್ತಿತ್ತು. ಅದರಲ್ಲೂ ಮಹಿಳೆಯರಲ್ಲಿ ಭಯ ಹುಟ್ಟಿಸಿ ನಿದ್ದೆಗೆಡಿಸಿತ್ತು.

ಅದನ್ನು ಸೆರೆ ಹಿಡಿದು ಬೇರೆಡೆ ಸಾಗಿಸಬೇಕೆನ್ನುವ ಪ್ರಯತ್ನಗಳು ಮುಂದುವರಿದಿದ್ದವು. ಹಿಡಿಯುವ ಎಲ್ಲ ಪ್ರಯತ್ನಗಳನ್ನೂ ಮಂಗ ವಿಫಲಗೊಳಿಸಿತ್ತು.

ಆದರೆ ಗುರುವಾರ ಮಂಗ ಮಹಿಳೆಯೊಬ್ಬರ ಮನೆ ಹೊಕ್ಕು ಬುಟ್ಟಿಯಲ್ಲಿನ ರೊಟ್ಟಿ ಕದಿಯುವ ಪ್ರಯತ್ನದಲ್ಲಿದ್ದಾಗ ಮಹಿಳೆ ಹೊರಗಿನಿಂದ ಬಾಗಿಲು ಹಾಕಿ ಗ್ರಾಮಸ್ಥರನ್ನು ಕರೆದರು. ಅವರು ಅರಣ್ಯ ಇಲಾಖೆಗೆ ಕರೆ ಮಾಡಿ ಸಿಬ್ಬಂದಿ ಕರೆಸಿ ಮಂಗನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರಾಮದ ವಯೋವೃದ್ಧರು, ಮಕ್ಕಳು, ಮಹಿಳೆಯರು ಸೇರಿ 50ಕ್ಕೂ ಹೆಚ್ಚು ಜನರ ಮೈಮೇಲೆ ಎರಗಿ ಗಾಯಗೊಳಿಸಿದ್ದ ಮಂಗವನ್ನು ಸೆರೆ ಹಿಡಿಯಲು ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿ ಹಾಗೂ ಪರಿಣಿತ ತಂಡ ಅನೇಕ ಬಾರಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.

ಜಡ್ರಾಮಕುಂಟಿಯಲ್ಲಿ ಹಲವು ದಿನಗಳಿಂದ ಉಪಟಳ ನಡೆಸಿ ಜನರಿಗೆ ತೊಂದರೆ ಉಂಟು ಮಾಡಿದ್ದ ಮಂಗವನ್ನು ಸೆರೆ ಹಿಡಿದು ಗೋಣಿ ಚೀಲದಲ್ಲಿ ಹಾಕಿ ಬೇರೆಡೆ ಸಾಗಿಸಲಾಯಿತು. ಇದರಿಂದ ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ ಎಂದು ಕಡ್ಲಿಮಟ್ಟಿ ಪಿಡಿಒ ಚಂದ್ರಕಾಂತ ತಿಮ್ಮಾಪುರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-19-157214847

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.