ಬಾಗಲಕೋಟೆ: ಮುಳುಗಡೆಯಾದ ಕಿಲ್ಲಾ ಪ್ರದೇಶ ಜನರ ಮನೆಗಳ ಪುನರ್ವಸತಿ ಮತ್ತು ನಗರದ ಸರ್ವತೋಮುಖದ ಅಭಿವೃದ್ಧಿ ಮಾಡಿದ ಬಿಜೆಪಿಯನ್ನು ಮತ್ತೊಮ್ಮೆ ಬೆಂಬಲಿಸಿ ನಗರಾಭಿವೃದ್ಧಿಗೆ ಕೈಜೋಡಿಸಿ ಎಂದು ವೀರಣ್ಣ ಚರಂತಿಮಠ ಮನವಿ ಮಾಡಿದರು.

ಬಾಗಕೋಟೆಯ ಕಿಲ್ಲಾದ ಕೊತ್ತಲೇಶ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸುತ್ತಲಿನ ಪ್ರದೇಶಗಳಲ್ಲಿ ಮತಯಾಚನೆ ಮಾಡಿದ ಅವರು, ಮುಳಗಡೆ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿವಾರಿಸಿ ಮೂಲಸೌಕರ್ಯ, ಪರಿಹಾರ ಮತ್ತು ಪುನರ್ವಸತಿ ಮನೆಗಳನ್ನು ನ್ಯಾಯಬದ್ಧ ನೀಡುವ ಕೆಲಸವನ್ನು ಬಿಜಿಪಿಯು ಮಾಡಿದೆ. ಮೂರು ವರ್ಷಗಳಿಂದ ಎದುರಾದ ಸಂಕಷ್ಟಕಗಳಿಂದ ಹೊರಬರಲು ಉಪಚುನಾವಣೆಯಲ್ಲಿ ಬಹುಮತಗಳ ಅಂತರದಲ್ಲಿ ಕಮಲಕ್ಕೆ ಮತ ನೀಡಿ ಗೆಲ್ಲಿಸಿ ಎಂದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ರೇಖಾ ಕಲಬುರ್ಗಿ, ಜಗದೀಶ್ ಓಲೇಕಾರ, ಮುರಳಿ ಕೋಟೇಶ್ವರ, ದುಂಡಪ್ಪ ಏಳೆಮ್ಮಿ, ಗಿರೀಶ ಭಾಂಡಗೆ, ಬಸವರಾಜ ಯಂಕಂಚಿ, ವಿಲಾಸ ವಂದಕುದರಿ, ಪಾಲ್ಗೊಂಡಿದ್ದರು.

ನಗರದ ವಿವಿಧೆಡೆ ಮಾಜಿ ಸಂಸದ ಪ್ರತಾಪ್ ಸಿಂಹ ಮನೆ, ಮನೆಗೆ ತೆರಳಿ ವೀರಣ್ಣ ಚರಂತಿಮಠ ಅವ ಮತಯಾಚನೆ ಮಾಡಿದರು.

ಇದೇ ವೇಳೆ ಛತ್ರಪತಿ ಸಂಭಾಜಿ ಯುವಕ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಮತಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ವೈಚಾರಿಕ, ಸೃಜನಶೀಲರಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕನಸುಗಳನ್ನು ನನಸು ಮಾಡಿದ ಕೀರ್ತಿ ವೀರಣ್ಣ ಚರಂತಿಮಠರಿಗೆ ಸಲ್ಲುತ್ತದೆ ಎಂದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-19-2068576647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.