ಬಾಗಲಕೋಟೆ: ಇಳಕಲ್ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಬಾಹ್ಯಾಕಾಶ ವಿಜ್ಞಾನಿ ಎಸ್. ನಂಬಿ ನಾರಾಯಣನ್, ಉದ್ಯಮಿ ಮಹೇಶ ಬೆಲ್ಲದ ಅವರಿಗೆ ಜಮಖಂಡಿಯಲ್ಲಿರುವ ಬಾಗಲಕೋಟ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆನಂದ ದೇಶಪಾಂಡೆ, ಗುರುಮಹಾಂತ ಸ್ವಾಮೀಜಿ ಅವರು ದಾರ್ಶನಿಕರಾಗಿ ವ್ಯಸನ ಮುಕ್ತ ಸಮಾಜ, ಸಾಮಾಜಿಕ ಸುಧಾರಣೆಗಳಿಗೆ ಮಾಡಿರುವ ಕಾರ್ಯ ಗುರುತಿಸಿ, ಎಸ್. ನಂಬಿ ನಾರಾಯಣನ್ ಅವರಿಗೆ

ಭಾರತೀಯ ಬಾಹ್ಯಾಕಾಶಕ್ಕೆ ನೀಡಿದ ಕೊಡುಗೆಗಾಗಿ ನೀಡಲಾಗುತ್ತಿದೆ ಎಂದರು.

ಮಹೇಶ ಬೆಲ್ಲದ ಅವರಿಗೆ ಟೆಕ್ ಉದ್ಯಮ, ಸಾಮಾಜಿಕ ಸೇವೆ, ಗುಣಮಟ್ಟದ ಶಿಕ್ಷಣಕ್ಕೆ ನೀಡಿದ ಕೊಡುಗೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾದೆ ಎಂದರು.

ಏ.24 ರಂದು ಬೆಳಿಗ್ಗೆ 11.30ಕ್ಕೆ ಬಿಎಲ್ಡಿಇ ದರ್ಬಾರ್ ಹಾಲ್ನಲ್ಲಿ ನಡೆಯುವ ಒಂದನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.