ಬಾಗಲಕೋಟೆ: ಆಶಾ ಕಾರ್ಯಕರ್ತೆಯರ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಎಲ್ಐಸಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆಯರು ಬಾಕಿ ಗೌರವ ಧನವನ್ನು ಕೂಡಲೇ ಪಾವತಿಸಿ, ಕಾರ್ಮಿಕ ವಿರೋಧಿ ನೀತಿಗಳಿಗೆ ಧಿಕ್ಕಾರ ಎಂಬ ಘೊಷಣೆಗಳನ್ನು ಕೂಗಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಚ್. ಟಿ., ಒಂದು ವರ್ಷದಿಂದ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ, ಪ್ರೋತ್ಸಾಹ ಧನ ಪ್ರತಿ ತಿಂಗಳು ಬರುತ್ತಿಲ್ಲ. ಈಗಲೂ 3-4 ತಿಂಗಳವರೆಗೆ ಕೇಂದ್ರದ ಪ್ರೋತ್ಸಾಹ ಧನ ಬಾಕಿ ಇದೆ. ಗೌರವಧನವೂ ಬಾಕಿ ಇದೆ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತೀ ತಿಂಗಳು ನಿಗದಿತವಾಗಿ ಬಿಡುಗಡೆ ಮಾಡದ್ದರಿಂದ ಕುಟುಂಬ ಸಾಗಿಸುವುದಕ್ಕೆ ತೊಂದರೆಯಾಗುತ್ತಿದೆ. ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಕೇಂದ್ರದ ಪ್ರೋತ್ಸಾಹ ಧನ ಬರುತ್ತಿಲ್ಲ. ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್ಗಳ ಹಣ ಬಿಡುಗಡೆ ಆಗಿಲ್ಲ. ಹಲವರ ಹಲವು ತಿಂಗಳ ಗೌರವ ಧನ, ಪ್ರೋತ್ಸಾಹ ಧನ ಕಡಿತ ಮಾಡಲಾಗಿದೆ. ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಒಟ್ಟಾರೆ ಕಾರ್ಯಕರ್ತೆಯರು ಸಂಕಷ್ಟದಲ್ಲಿದ್ದಾರೆ ಎಂದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಶೈನಾಜ್ ಜಂಗಿ ಮಾತನಾಡಿ, 9 ವಿವಿಧ ಸೇವೆಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿರುವುದಾಗಿ ತಿಳಿಸಿರುತ್ತಾರೆ. ಇದರಿಂದ ಪ್ರತಿ ಕಾರ್ಯಕರ್ತೆಗೆ ₹500 ರಿಂದ ₹1,000 ವರೆಗೆ ಪ್ರೋತ್ಸಾಹ ಧನ ಕಡಿತವಾಗಲಿದೆ. ಈ ಕೆಲಸಗಳನ್ನು ಕಾರ್ಯಕರ್ತೆಯರು ಹಲವಾರು ವರ್ಷಗಳಿಂದ ಮಾಡುತ್ತಿದ್ದು, ತಾಯಿ-ಮಗು ಸುರಕ್ಷತೆಗೆ, ಬಡ ಜನತೆಯ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು.

ಈ ಸೇವೆಗಳನ್ನು ನೀಡದಿದ್ದಲ್ಲಿ ಜನರಿಗೆ ಹಲವಾರು ಸಮಸ್ಯೆಗಳು ಆಗುತ್ತವೆ. ಕೂಡಲೇ ಮೇಲಿನ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ದಿನಾಂಕ ನಿಗದಿ ಮಾಡಿ ಸಂಘದ ಮುಖಂಡರೊಂದಿಗೆ ಸಭೆ ಕರೆದು ಸೂಕ್ತಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನುಕೈಬಿಡಬೇಕು. ಮೌಲ್ಯಮಾಪನ ಹೆಸರಿನಲ್ಲಿ ಆಗುತ್ತಿರುವ ಶೋಷಣೆ ನಿಲ್ಲಿಸಿ. ನಿವೃತ್ತರಾಗಿರುವವರಿಗೆ ಇಡಿಗಂಟು ನೀಡಿರಿ. 2025 ಜನವರಿಯಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ಕೇಂದ್ರದ ಪ್ರೋತ್ಸಾಹ ಧನ, ರಾಜ್ಯದ ಗೌರವ ಧನ ಸೇರಿಸಿ ತಿಂಗಳಿಗೆ ₹10 ಸಾವಿರ ಗೌರವ ಧನ ನೀಡಿ. ಬಜೆಟ್ನಲ್ಲಿ ಘೋಷಿಸಿದಂತೆ ₹1,000 ಹೆಚ್ಚಳ ಮಾಡಬೇಕು ಎಂದು ಕಾರ್ಯಕರ್ತೆಯರು ಒತ್ತಾಯಿಸಿದರು.

ಗೌರವಾಧ್ಯಕ್ಷರಾದ ಅಂಜನಾ ಕುಂಬಾರ, ಎಐಡಿವೈಒ ಯುವಜನ ಸಂಘಟನೆಯ ಶ್ರೀಕಾಂತ ಕೊಂಡಗೂಳಿ ಮಾತನಾಡಿದರು. ರುಕ್ಸಾನಾ ನಾಗಠಾಣ, ಸುರೇಖಾ ಕಾಳೆ, ಗೀತಾ ಈಳಗೇರ, ರುಕ್ಮಿಣಿ ಕುಳಗೇರಿ, ಬಸಮ್ಮ ಬೂಪ್ರದ್, ಭಾರತಿ ಚವ್ಹಾಣ, ಮಹಾನಂದ ತೆರದಾಳ, ಭಾರತಿ ಮೇಟಿ, ಮಂಜುಳಾ ಸಿಡ್ಲವಗೋಳ, ಬೋರಮ್ಮ ಗಲಗಲಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-1583848141

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.