ಬಾಗಲಕೋಟೆ: ‘ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಜೆಪಿಯ ಜೇಬುಗಳ್ಳರ ಬಗ್ಗೆ ಜನ ಎಚ್ಚರದಿಂದ ಇರಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲಾ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು, ‘ಮೂರ್ಖರ ದಿನ ನಮ್ಮ ಸಂಸ್ಕೃತಿ ಅಲ್ಲದಿದ್ದರೂ ಮೋದಿ ಸರ್ಕಾರ ಏ.1ರಿಂದ ಜನರನ್ನು ಮೂರ್ಖರಾಗಿಸುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಆರೋಪಿಸಿದರು.

‘ವಾಣಿಜ್ಯ ಬಳಕೆ ಸಿಲಿಂಡರ್ ದರ ₹200 ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ನ ಬೆಲೆ ಏರುತ್ತಲೇ ಇದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ತೆರಿಗೆ ಹೆಚ್ಚಿಸಲಾಗಿದೆ. ಐದು ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ ₹43 ಸಾವಿರ ಕೋಟಿ ಟೋಲ್ ತೆರಿಗೆ ಸಂಗ್ರಹ ಆಗಿದೆ ಎಂದು ಹೇಳಿದರು.

‘ಬಾಗಲಕೋಟೆ, ದಾವಣಗೆರೆಯ ಚುನಾವಣೆ ಎರಡು ಸಿದ್ಧಾಂತಗಳ ಮೇಲೆ ನಡೆದಿದೆ. ಕಾಂಗ್ರೆಸ್ನ ಮಾರ್ಗ ಅಭಿವೃದ್ಧಿ, ಜನಕಲ್ಯಾಣ, ಜನಶಕ್ತಿಯದಾದರೆ, ಬಿಜೆಪಿಯದ್ದು ದ್ವೇಷ, ವಿಘಟನೆ, ವಿನಾಶದಿಂದ ಕೂಡಿದೆ. ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಬದುಕಿಗೆ ಶಕ್ತಿ ಬಂದಿದೆ’ ಎಂದರು.

‘ಸಿ.ಎಂ ಸಿದ್ದರಾಮಯ್ಯ ಸೂಟ್ಕೇಸ್ನೊಂದಿಗೆ ಬಾಗಲಕೋಟೆಗೆ ಬಂದಿದ್ದಾರೆ’ ಎಂಬ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ವಿಜಯೇಂದ್ರ ಅವರು ಮೊದಲು ಯತ್ನಾಳ ವಿಷಯದ ಕಡೆಗೆ ಗಮನಹರಿಸಲಿ’ ಎಂದು ವ್ಯಂಗ್ಯವಾಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ‘15ನೇ ಹಣಸಕಾಸು ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಕ್ಕೆ ಕೊಡಬೇಕಿದ್ದ ₹ 15,583 ಕೋಟಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬರುತ್ತಿದೆ. ಇದಕ್ಕೆ ಬಿಜೆಪಿಯವರು ಉತ್ತರಿಸಬೇಕು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-19-2082209586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.