ಬಾಗಲಕೋಟೆ: ಬಿಜೆಪಿ ಅವಧಿಯಲ್ಲಿಯೇ ಬಾಗಲಕೋಟೆ ಅಭಿವೃದ್ಧಿ ಕಂಡಿದ್ದು, ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸೋಣ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿದರು.

ನವನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಣ್ಣ ಚರಂತಿಮಠ ಅವರ ಶಾಸಕರಾಗಿದ್ದ ಅವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಅವರ ಅವದಿಯಲ್ಲಿ ಬಿಟಿಡಿಎದಿಂದ ಮುಳಗಡೆ ಫಲಾನುಭವಿಗೆಳಿಗೆ, ಬಾಡಿಗೆದಾರರಿಗೆ, ವಯಸ್ಕರ ಮಕ್ಕಳಿಗೆ ಸೇರಿ 2,270ಕ್ಕೂ ಹೆಚ್ಚು ಹಕ್ಕುಪತ್ರಗಳ ವಿತರಣೆ ಮಾಡಿದ್ದಾರೆ ಎಂದರು.

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಸ್ಥಾಪನೆ, ಬಾಗಲಕೋಟೆ ನಗರಸಭೆಯನ್ನು ಗ್ರೇಡ್ 1 ಮೇಲ್ದರ್ಜೇಗೆ ಏರಿಸುವ ಕೆಲಸ ಮಾಡಿದ್ದಾರೆ. ಸಾವಿರಾರು ಕೋಟಿ ಅಭಿವೃದ್ಧಿ ಕೆಲಸಗಳು ನಡೆದಿದ್ದವು. ಈಗ ನಮ್ಮ ಗುರಿ ಬಿಜೆಪಿ ಗೆಲುವು ಮಾತ್ರ ಎಂದು ಹೇಳಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಗನಗೌಡ ಗೌಡರ, ಪ್ರಭುಸ್ವಾಮಿ ಸರಗಣಾಚಾರಿ, ಬಸವರಾಜ ಯಂಕಂಚಿ, ರಾಜು ನಾಯ್ಕರ, ಸುರೇಶ ಕೋಣ್ಣೂರ, ಬಸವರಾಜ ಹುನಗುಂದ, ಕಾವೇರಿ ರಾಠೋಡ, ಮುತ್ತು ಲಮಾಣಿ, ಗಂಗಾರಾಮ ಚವ್ಹಾಣ ಮತ್ತಿತರರು ಇದ್ದರು.ಪದಗ್ರಹಣ: ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ದಿಲೀಪ್ ರಾಠೋಡ ಅವರು ಪದಗ್ರಹಣ ಮಾಡಿದರು. ಪದಗ್ರಹಣ ಹಾಗೂ ಪಕ್ಷ ಸೇರ್ಪಡೆ ಅಂಗವಾಗಿ ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260317-19-1680451707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.