ಬಾಗಲಕೋಟೆ: ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತಷ್ಟು ಉತ್ತಮವಾಗುತ್ತದೆ ಎಂದು ಬಿವಿವಿಎಸ್ ಆಯುಷ್ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಹೇಳಿದರು.

ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರ ಜನ್ಮ ದಿನ ಅಂಗವಾಗಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದರು.

ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ರಕ್ತದಾನ. ರಕ್ತದಾನಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಮಾಡಿದವರಿಗೂ ಆರೋಗ್ಯದ ಹಲವು ಲಾಭಗಳು ದೊರೆಯುತ್ತವೆ. ಕೆಲವು ಸಂದರ್ಭದಲ್ಲಿ ಹಣ ಕೊಟ್ಟರೂ ನಮಗೆ ಬೇಕಾದ ರಕ್ತ ಸಿಗುವುದಿಲ್ಲ. ರಕ್ತ ನೀಡಿ ಜೀವ ಉಳಿಸಿ ಎಂದರು.

ಹಾನಗಲ್ ಕುಮಾರೇಶ್ವರ ರಕ್ತ ಭಂಡಾರದ ಮುಖ್ಯ ವೈದ್ಯಾಧಿಕಾರಿ ಡಾ.ಕೇಶವ ಕುಲಕರ್ಣಿ ಮಾತನಾಡಿ, ಮಾನವ ದೇಹದ ಎಲ್ಲ ಭಾಗಗಳನ್ನು ಕೃತಕವಾಗಿ ನಿರ್ಮಿಸಬಹುದು. ಆದರೆ, ರಕ್ತವನ್ನು ಕೃತಕವಾಗಿ ನಿರ್ಮಿಸಲು ಸಾಧ್ಯವಾಗಿಲ್ಲ. ಯುವ ಜನತೆ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು..

ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿದರು. ಡಾ.ರವಿ.ಕೋಟೆಣ್ಣವರ, ಡಾ.ಅಖಿಲಾ ಹುಲ್ಲೂರ., ಫಾತಿಮಾ ಬಾಲಸಿಂಗ, ಡಾ.ಕೆ.ಪ್ರದೀಪ, ಡಾ.ಸುಧೀರ ಬೆಟಗೇರಿ, ಡಾ.ವಿಜಯಲಕ್ಷ್ಮಿ ಪೂಜಾರ ಮತ್ತಿತರರು ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-1913732952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.