ಬಾಗಲಕೋಟೆ: ಮುಖ್ಯಮಂತ್ರಿ ಬದಲಾವಣೆಯೊಂದಿಗೆ ಸಚಿವ ಸಂಪುಟದಲ್ಲೂ ಕೆಲವು ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಜಿಲ್ಲೆಯಲ್ಲಿಯೂ ಸಚಿವ ಸ್ಥಾನದ ಆಕಾಂಕ್ಷಿಗಳು ಚಟುವಟಿಕೆ ತೀವ್ರಗೊಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಆರ್.ಬಿ. ತಿಮ್ಮಾಪುರ ಸಚಿವರಾಗಿದ್ದರು. ಈಗ ಅವರು ಮುಂದುವರೆಯುವರೇ, ಅವರೊಂದಿಗೆ ಜಿಲ್ಲೆಯ ಇನ್ನೊಬ್ಬ ಶಾಸಕರು ಸೇರ್ಪಡೆಯಾಗುವರೇ ಎಂಬ ಚರ್ಚೆ ಜೋರಾಗಿದೆ.

ಈಗಾಗಲೇ ಈ ಹಿಂದೆ ಸಚಿವರಾಗಿರುವ ಕೆಲವರು ಸಚಿವ ಸ್ಥಾನ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಹಲವು ಶಾಸಕರ ಆಗ್ರಹವಾಗಿದೆ. ಅದಕ್ಕಾಗಿ ಕೆಲವು ಶಾಸಕರು ದೆಹಲಿಗೂ ಹೋಗಿ ಹೈಕಮಾಂಡ್ಗೆ ಸಂದೇಶ ಮುಟ್ಟಿಸಿ ಬಂದಿದ್ದಾರೆ

ನಾಲ್ಕು ಬಾರಿ ಶಾಸಕರಾಗಿರುವ ಜೆ.ಟಿ. ಪಾಟೀಲ ಸಚಿವರಾಗಬೇಕು ಎಂಬ ಪ್ರಯತ್ನ ತೀವ್ರಗೊಳಿಸಿದ್ದಾರೆ. ಇತ್ತೀಚೆಗೆ ದೆಹಲಿಗೆ ಹೋದ ಶಾಸಕರ ತಂಡದಲ್ಲೂ ಅವರಿದ್ದರು.

ಸಚಿವರಾಗಿರುವ ಆರ್.ಬಿ. ತಿಮ್ಮಾಪುರ ದಲಿತ ವರ್ಗದ ಮಾದಿಗ ಕೋಟಾದಡಿ ಸಚಿವರಾಗಿದ್ದಾರೆ. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷ ಸರ್ಕಾರ ರಚಿಸಲಿ ಮುಧೋಳ ಪ್ರತಿನಿಧಿಸುವ ಶಾಸಕರು ಸಚಿವರಾಗುತ್ತಾರೆ. ದಲಿತಕೋಟಾದಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳಲು ತಿಮ್ಮಾಪುರ ಮುಂದಾಗಿದ್ದಾರೆ.

ಇನ್ನೊಂದೆಡೆ ಜೆ.ಟಿ. ಪಾಟೀಲರ ಜೊತೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸಹಸಚಿವರಾಗುವ ಯತ್ನ ನಡೆಸಿದ್ದಾರೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಜಿಲ್ಲೆಯ ಬಿ.ಬಿ. ಚಿಮ್ಮನಕಟ್ಟಿ, ಎಸ್.ಆರ್. ಕಾಶಪ್ಪನವರ, ಆರ್.ಬಿ. ತಿಮ್ಮಾಪುರ ಮೂವರು ಸಚಿವರಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಉಮಾಶ್ರೀ, ಎಸ್.ಆರ್. ಪಾಟೀಲ, ನಂತರದಲ್ಲಿ ಎಚ್.ವೈ. ಮೇಟಿ, ಆರ್.ಬಿ. ತಿಮ್ಮಾಪುರ ಸಹ ಉಮಾಶ್ರೀ ಅವರೊಂದಿಗೆ ಸಚಿವರಾಗಿದ್ದರು.

ಬಿಜೆಪಿ ಸರ್ಕಾರದಲ್ಲೂ ಗೋವಿಂದ ಕಾರಜೋಳ ಹಾಗೂ ಮುರುಗೇಶ ನಿರಾಣಿ ಇಬ್ಬರು ಸಚಿರಾಗಿದ್ದರು. ಈಗಲೂ ಇಬ್ಬರಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ ಜಿಲ್ಲೆಯ ಜನಪ್ರತಿನಿಧಿಗಳು.

ಕುರುಬ ಸಮುದಾಯದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸಮುದಾಯದ ಒಲವು ಉಳಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದಾದರೆ ಜಿಲ್ಲೆಯ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದಿರುವ ಉಮೇಶ ಮೇಟಿ ಅದೇ ಸಮುದಾಯಕ್ಕೆ ಸೇರಿದ್ದಾರೆ. ಅವರಿಗೆ ಅದೃಷ್ಟದ ಬಾಗಿಲು ತೆಗೆಯುವುದೇ ನೋಡಬೇಕು. ಈ ಇಬ್ಬರೂ ಶಾಸಕರ ತಂದೆಯವರೂ ಸಚಿವರಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1416039671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.