ಬಾಗಲಕೋಟೆ: ರಾಜ್ಯದಲ್ಲಿ ಹೊಸ ಸಚಿವ ಸಂಪುಟ ರಚನೆಯ ಕಸರತ್ತು ನಡೆದಿದೆ. ಮೊದಲ ಹಂತದಲ್ಲಿ 9ರಿಂದ 12 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಆ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹೆಸರು ಕೇಳಿ ಬರುತ್ತಿಲ್ಲ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಈ ಹಿಂದಿನ ಅವಧಿಗಳಲ್ಲಿ ಇಷ್ಟೇ ಶಾಸಕರಿದ್ದಾಗ ಜಿಲ್ಲೆಯ ಇಬ್ಬರು, ಮೂವರು ಸಚಿವರಾಗುತ್ತಿದ್ದರು. ಜಿಲ್ಲೆಯ ಜನಪ್ರತಿನಿಧಿಗಳನ್ನು ತೆಗೆದುಕೊಳ್ಳದೇ ಸಚಿವ ಸಂಪುಟ ರಚನೆ ಕಷ್ಟ ಎನ್ನುವ ಸ್ಥಿತಿ ಇರುತ್ತಿತ್ತು. ಆದರೆ, ಈಗ ಸಚಿವ ಸ್ಥಾನ ನೀಡಿ ಎಂದು ದುಂಬಾಲು ಬೀಳುವ ಸ್ಥಿತಿ ಜಿಲ್ಲಾ ನಾಯಕರದ್ದಾಗಿದೆ. ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ಕೆಲ ಜನಪ್ರತಿನಿಧಿಗಳ ಬೆಂಬಲಿಗರು ಆಗ್ರಹ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಕೂಡ ಸಚಿವ ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಇವರೂ ಸಂಪುಟಕ್ಕೆ ಅನಿವಾರ್ಯ ಎನ್ನುವ ಸ್ಥಿತಿ ಸೃಷ್ಟಿ ಮಾಡುವಲ್ಲಿ ಜಿಲ್ಲಾ ನಾಯಕರು ವಿಫಲರಾಗಿದ್ದಾರೆ.

ಜಿಲ್ಲೆಯ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ ಅವರು ಮುಖ್ಯಮಂತ್ರಿಯಾಗಿದ್ದರು. ಎಸ್. ನಿಜಲಿಂಗಪ್ಪ ಅವರೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದಲೇ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿದ್ದರಾಮಯ್ಯ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾದಾಗ ಬಾದಾಮಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದರು. ಮುಧೋಳದ ಶಾಸಕರಾಗಿದ್ದ ಗೋವಿಂದ ಕಾರಜೋಳ ಅವರು ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.

ಜಿಲ್ಲೆಯಿಂದ ಗೆದ್ದ ಮುಧೋಳ ತಾಲ್ಲೂಕಿನ ಶಾಸಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಇದು ಅರ್ಹತೆಗಿಂತ ದಲಿತ ಕೋಟಾದಲ್ಲಿಯೇ ಸಿಕ್ಕಿದ್ದು ಹೆಚ್ಚು. ಆ ಕಾರಣಕ್ಕಾಗಿಯೇ ಮೂರು ಬಾರಿ ಸಚಿವರಾಗಿದ್ದರೂ ಅಲ್ಲಿನ ಶಾಸಕರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ಪಡುವಂತಾಗಿದೆ.

ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ, ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಜಿಲ್ಲೆಯ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೂ ಕಾಣಿಕೆ ನೀಡುವ ಮಟ್ಟಕ್ಕೆ ಬೆಳೆದಿಲ್ಲ. ಇನ್ನು ಬೇರೆ ಜಿಲ್ಲೆಯವರಿಗೂ ನಾಯಕರಾಗುವುದು ದೂರದ ಮಾತು. ಈಗ ಕಾಂಗ್ರೆಸ್ ಶಾಸಕರಾಗಿರುವ ಬಹುತೇಕ ಶಾಸಕರು ಒಂದು ಚುನಾವಣೆ ಗೆದ್ದರೆ, ಇನ್ನೊಂದು ಚುನಾವಣೆ ಸೋತಿದ್ದಾರೆ.

ಈಚೆಗೆ ಜಿಲ್ಲೆಯಲ್ಲಿ ನಡೆದ ಉಪಚುನಾವಣೆಯ ನಾಯಕತ್ವವನ್ನೂ ಬೆಳಗಾವಿ ಜಿಲ್ಲೆಯವರಾದ ಸತೀಶ ಜಾರಕಿಹೊಳಿ ಅವರಿಗೆ ವಹಿಸಲಾಗಿತ್ತು. ಸಿದ್ದರಾಮಯ್ಯ ಅವರ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಜಿಲ್ಲೆಯ ಒಬ್ಬರೇ ಸಚಿವರಾಗಿದ್ದರು. ಅಕ್ಕ–ಪಕ್ಕದ ಜಿಲ್ಲೆಗಳ ನಾಯಕರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಅದೇ ಮಾತು ಜಿಲ್ಲಾ ನಾಯಕರಿಗೆ ಅನ್ವಯವಾಗುತ್ತಿಲ್ಲ. ಜಿಲ್ಲಾ ನಾಯಕರ ನಡುವಿನ ಒಗ್ಗಟ್ಟಿನ ಕೊರತೆ, ಗಟ್ಟಿ ಧ್ವನಿ ಇಲ್ಲದಿರುವುದೂ ಇಂದಿನ ಸ್ಥಿತಿಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.