ಬಾಗಲಕೋಟೆ: ಇಎಸ್ಐ ಕಾರ್ಡ್ನಿಂದ ಪಲಾನುಭವಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ಪ್ರಾಥಮಿಕ ಹಾಗೂ ಹೆಚ್ಚಿನ ಚಿಕಿತ್ಸೆಗೆ ಅನುಕೂಲವಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಎಸ್ಐ ಅಧಿಕಾರಿ ಡಾ.ಮಾನಸಾ ಹೇಳಿದರು.

ಬಿವಿವಿ ಸಂಘದ ಆರ್ಯವೇದ ಕಾಲೇಜು, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಗುರುವಾರ ನಡೆದ ಇಎಸ್ಐ ವಿಮಾದಾರರಿಗೆ ವೈದ್ಯಕೀಯ ಫಲಾನುಭವಿಗಳ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಎಸ್ಐ ಕಾರ್ಡ್ನಿಂದ ಅಂಗವಿಕಲರಿಗೆ ₹25 ಸಾವಿರ ನೀಡಲಾಗುವುದು. ದೋಷಗಳಿಲ್ಲದಂತೆ ತಮ್ಮ ಹಾಗೂ ಕುಟುಂಬದ ಸದಸ್ಯರ ಮಾಹಿತಿ ನೀಡಬೇಕು ಎಂದರು.

ಹೃದಯಾಘಾತ, ಅಪಘಾತ, ಸುಟ್ಟ ಗಾಯ, ವಿಶಪ್ರಾಷನ, ಹಾವು ಕಚ್ಚಿದಾಗ, ಲಕ್ವಾ, ಗರ್ಭಪಾತ, ಡೆಂಗಿ ಜ್ವರಕ್ಕೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ನಿಗದಿತ ಸಮಯದಲ್ಲಿ ರೆಫರನ್ಸ್ ಲೆಟರ್, ಪೇಷಂಟ್ ಕಾರ್ಡ್, ಸೇವಾ ಪ್ರಮಾಣಪತ್ರ, ರೋಗಿಯ ಆಧಾರ್ ಕಾರ್ಡ್ ಮತ್ತು ಎರಡು ಫೋಟೊದೊಂದಿಗೆ ಅರ್ಜಿ ನೀಡಿ, ವೆಚ್ಚ ಮರಪಾವತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಪ್ರಾಚಾರ್ಯ ಎಂ.ಎಸ್. ಹಿರೇಮಠ ಮಾತನಾಡಿ, ಇಎಸ್ಐ ಅಡಿ ಸಿಗುವಂತಹ ಎಲ್ಲ ಅನುಕೂಲಗಳನ್ನು ಪಡೆಯುವಲ್ಲಿ ಪಲಾನುಭವಿಗಳು ಯಶಸ್ವಿಯಾಗಿಲ್ಲ. ಇನ್ನೂ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಇಂತಹ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಇಎಸ್ಐ ಕಾರ್ಯದರ್ಶಿ ಎಂ.ಆರ್. ನಾಗರಾಜ, ಎಚ್.ಎನ್. ಯಾದವಾಡ, ಚಂದ್ರಶೇಖರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-19-1502338863

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.