ಬಾಗಲಕೋಟೆ: ಹೋಮಿಯೋಪಥಿ ಚಿಕಿತ್ಸೆ ಹಾಗೂ ಔಷಧಗಳು ಹಿರಿಯ ನಾಗರಿಕರಿಗೆ ಸೂಕ್ತವಾಗಿವೆ ಎಂದು 37ನೇ ಕರ್ನಾಟಕ ಬಟಾಲಿಯನ್ ಅಧಿಕಾರಿ ಕರ್ನಲ್ ದೇವಾಶಿಶ್ ಡೇ ಹೇಳಿದರು.

ಬಿವಿವಿಎಸ್ ಕ್ಯಾಂಪಸ್ನಲ್ಲಿರುವ ಎನ್ಸಿಸಿ ಬಟಾಲಿಯನ್ದಲ್ಲಿ ಸೇನಾ ನಿವೃತ್ತ ನೌಕರಿಗಾಗಿ ಬಿವಿವಿಎಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಯೋಜಿಸಿದ್ದ ಎರಡು ದಿನಗಳ ಉಚಿತ ಹೋಮಿಯೋಪಥಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಕ್ಕೆ ಜನ ಸಾಮಾನ್ಯರ ಬಗ್ಗೆ ಇರುವ ಸೇವಾ ಮನೋಭಾವ ಶ್ಲಾಘನೆ ಮಾಡಿದ ಅವರು, ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಾಧ್ಯಾಪಕಿಯ ಡಾ.ವಿಜಯಲಕ್ಷ್ಮಿ ಪಾಟೀಲ, ಡಾ.ತೃಪ್ತಿ ಶಿಂಧೆ ಹೋಮಿಯೋಪಥಿ ಚಿಕಿತ್ಸಾ ವಿಧಾನ ಕುರಿತು ಮಾತನಾಡಿದರು.

ಈ.ಸಿ.ಎಚ್ ಘಟಕದ ಕರ್ನಲ್ ಉಮಾಕಾಂತ ಫಲ್ಹಾರಿ. ಮೇಜರ್ ಸುಬೇದಾರ ಮಚೇಂದ್ರ ಪಾಟೀಲ ಇದ್ದರು. ವೈದ್ಯಾಧಿಕಾರಿ ಡಾ.ಮೇಘಾ ತಳವಾರ, ಪ್ರಾಧ್ಯಾಪಕರಾದ ಡಾ.ರವಿ.ಕೋಟೆಣ್ಣವರ, ಡಾ.ಅಖಿಲಾ ಹುಲ್ಲೂರ, ಡಾ.ವಿಜಯಲಕ್ಷ್ಮಿ ಪೂಜಾರ, ಡಾ.ವಿಜಯಕುಮಾರ ಸಂಕೇಶ್ವರಿ, ಡಾ.ಐಶ್ವರ್ಯಾ ಪಾಟೀಲ ಚಿಕಿತ್ಸೆ ನೀಡಿದರು. ನಿವೃತ್ತ ಸೇನಾ ನೌಕರರ ಸಂಘದ ಅಧ್ಯಕ್ಷ ಅರ್ಜುನ ಕೋರಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-32305266

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.