ಬಾಗಲಕೋಟೆ: ‘ಉತ್ತರ ಕರ್ನಾಟಕ ಭಾಗದಲ್ಲಿ ಮಾವು ಬೆಳೆಗೆ ಉತ್ತಮ ಅವಕಾಶಗಳಿದ್ದು, ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಿದೆ’ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಸಿಬಿಬಿಓ ಜೇನು ರೈತ ಉತ್ಪಾದಕರ ಸಂಘ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಸಹಯೋಗದಲ್ಲಿ ಶನಿವಾರ ಆರಂಭವಾದ ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಾವು ಬೆಳೆಗಾರರಿಗೆ ಉತ್ತೇಜನ ನೀಡಬೇಕು. ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯಾಗಬೇಕು’ ಎಂದರು.

‘ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಮಾವು ನಿಗಮ ಸ್ಥಾಪಿಸುವ ಕೆಲಸ ಮಾಡಬೇಕಿದೆ. ವಿಶ್ವವಿದ್ಯಾಲಯದಲ್ಲಿ ಮಾವಿನ ತಳಿಗಳ ಸುಧಾರಣೆ ಕಾರ್ಯ ಮಾಡಲಾಗುತ್ತಿದೆ. ವಿವಿಧ ತಳಿಗಳನ್ನು ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೇಳ ಆಯೋಜನೆ ಮಾಡಲಾಗಿದೆ. ಇದರ ಜೊತೆಗೆ ಚಿಕ್ಕಾಲಗುಂಡಿಯಲ್ಲಿ ರೈತರು ಬೆಳೆದ ಮಾವಿನ ತಳಿ ಪರಿಚಯಿಸುವ ಕೆಲಸ ಆಗಬೇಕು’ ಎಂದು ತಿಳಿಸಿದರು.

‘ಭಾರತ ಸೇರಿದಂತೆ 84 ದೇಶಗಳಲ್ಲಿ ಮಾವು ಬೆಳೆಯುತ್ತಿದ್ದಾರೆ. ಬೆಳೆದಿರುವ ಮಾವನ್ನು ಕಾರ್ಬನ್ ಮುಕ್ತವಾಗಿ ಮಾಡುವ ವ್ಯವಸ್ಥೆಯಿಂದ 500 ವಿಧದ ತಳಿಗಳು ಬಂದಿವೆ. ಮಾವಿನ 22 ಹೊಸ ತಳಿಗಳನ್ನು ಕಂಡು ಹಿಡಿಯಲಾಗಿದೆ. ಹೆಚ್ಚು, ಹೆಚ್ಚು ಮಾವು ಬೆಳೆಯುವ ಮೂಲಕ ಉತ್ತರ ಕರ್ನಾಟಕ ರೈತರು ಮುಂದೆ ಬರಬೇಕು’ ಎಂದರು.

ತೋವಿವಿಯ ಮೂಲಕ ಮಾವು ಸಂಶೋಧನಾ ಕೇಂದ್ರ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ತೋಟಗಾರಿಕೆ ವಿವಿಯ ಪ್ರಭಾರ ಕುಲಪತಿ ತಮ್ಮಯ್ಯ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ಕಲಾದಗಿ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಟಿ.ಪಾಟೀಲ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟೇಶಲು, ಪ್ರಗತಿಪರ ರೈತ ಮೋಹನ ದೇಸಾಯಿ, ಪಿ.ಎಂ.ದೇಸಾಯಿ, ತೋವಿವಿಯ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ವಸಂತ ಗಾಣಿಗೇರ ಇದ್ದರು.

ಮಾವು ಮೇಳದಲ್ಲಿ 100ಕ್ಕೂ ಹೆಚ್ಚು ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರತ್ನಗಿರಿ, ದೇವಗಡ, ಧಾರವಾಡ ಅಪೂಸ್, ಮಲ್ಲಿಕಾ, ಆರ್ಕಾ ನೀಲಕಿರಣ, ಆರ್ಕಾ ಉದಯ, ಅಮ್ರಪಲ್ಲಿ, ಸಿಂಧು, ನೀಲಮ್, ರತ್ನಾ, ದಶೇರಿ, ಟಾಮ್ಮಿ ಆಟಕಿನ್ಸ್, ಪೈರಿ, ತೋತಾಪುರಿ ಸೇರಿದಂತೆ ಹಲವು ತಳಿಗಳಿದ್ದವು.

ಮಾವಿನಿಂದ ತಯಾರಿಸಲಾದ ಮೌಲ್ಯವರ್ಧಿತ ಉತ್ಪನ್ನಗಳಾದ ಮಾವಿನ ಜ್ಯಾಂ, ಜ್ಯೂಸ್, ಉಪ್ಪಿನಕಾಯಿ, ಫಲ್ಫ್, ಒಣಮಾವು ಸೇರಿದಂತೆ ವಿವಿಧ ಉತ್ಪನ್ನಗಳ ಪ್ರದರ್ಶನದಲ್ಲಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-823298035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.