ಬಾಗಲಕೋಟೆ: ‘ರಾಜ್ಯ ಸರ್ಕಾರದಲ್ಲಿ ಹಣವಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಬಿಜೆಪಿಯವರು ದೂರುತ್ತಾರೆ. ಯುಕೆಪಿ 3ನೇ ಹಂತವನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ಮೂರನೇ ಯುನಿಟ್ ಅಭಿವೃದ್ಧಿಗೆ ₹2,700 ಕೋಟಿ ನೀಡಲಾಗಿದೆ. ಬಿಜೆಪಿಯವರು ಟೀಕೆ ಮಾಡುವುದು ಬಿಟ್ಟರೆ ಏನು ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನಿಸಿದರು.

ನವನಗರದಲ್ಲಿ ಶನಿವಾರ ನಡೆದ ಸರ್ಕಾರಿ ವೈದ್ಯಕೀಯ ಕಾಲೇಜು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ನಮ್ಮ ಸರ್ಕಾರ. ನಾವು ಹಿಂದೂಗಳ ವಿರೋಧಿಗಳಲ್ಲ. ಮೂರ್ತಿ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಎಷ್ಟು ದಿನ ರಾಜಕಾರಣದಲ್ಲಿರುತ್ತೇವೆ ಎಂಬುದು ಮುಖ್ಯವಲ್ಲ, ಏನು ಮಾಡಿದ್ದೀರಿ ಎಂಬುದು ಮುಖ್ಯ. ಮೇಟಿ ಏನು ಓದಿದ್ದರು ಗೊತ್ತಿಲ್ಲ. ಆದರೆ, ವೈದ್ಯಕೀಯ ಕಾಲೇಜಿನ ಕನಸು ಕಂಡಿದ್ದರು. ಅದು ಈಗ ನನಸಾಗಿದೆ. ರಮೇಶ ಬದ್ನೂರ, ಬಸವರಾಜ ಧರ್ಮಂತಿ ಮತ್ತಿತರರು ಹೋರಾಟ ಮಾಡಿದಾಗ ಹಿಂದಿನ ಸರ್ಕಾರ ಯಾಕೆ ಮಾಡಲಿಲ್ಲ. ಕಾಲೇಜು ಆರಂಭಕ್ಕೆ ನಮ್ಮ ಸರ್ಕಾರವೇ ಬರಬೇಕಾಯಿತು’ ಎಂದರು.

‘ಐಹೊಳೆ ಸ್ಥಳಾಂತರ ಕಾರ್ಯ ಪೂರ್ಣ ಮಾಡಬೇಕು. ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕಿದೆ. ಅಮೀನಗಡ, ಕಮತಗಿ ಭಾಗದ ರಸ್ತೆಗಳಿಗೆ ₹150 ಕೋಟಿ ನೀಡಬೇಕು. ಕಿಲ್ಲಾ ಮುಳುಗಡೆ ಘೋಷಿಸುವ ಕೆಲಸಗಳು ಆಗಬೇಕಿವೆ’ ಎಂದು ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ‘ಬಾಗಲಕೋಟೆ, ವಿಜಯಪುರ ಜಿಲ್ಲೆಯ 2 ಲಕ್ಷ// ಮುಳುಗಡೆಯಾಗಿದೆ. ಆದರೆ, ಈ ಜಿಲ್ಲೆಯ 75 ಸಾವಿರ ಎಕರೆ ಮಾತ್ರ ನೀರಾವರಿಯಾಗಿದೆ. 1.33 ಲಕ್ಷ ಮುಳುಗಡೆಯಾಗುತ್ತದೆ. ಇದಕ್ಕೆ ಪರಿಹಾರ ನೀಡುವ ಕೆಲಸ ಆಗಬೇಕು’ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ‘ಸರ್ಕಾರಿ ವೈದ್ಯಕೀಯ ಕಾಲೇಜು ಬಡವರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯುಕೆಪಿ ಯೋಜನೆಯಲ್ಲಿ ಸರ್ಕಾರದಷ್ಟೇ ನಿಮ್ಮ ಕೊಡುಗೆಯೂ ಇದೆ. ಒಪ್ಪಂದ ದರಕ್ಕೆ ಭೂಮಿ ಕೊಡಲು ಮುಂದೆ ಬರುವ ಎಲ್ಲ ರೈತರಿಗೂ ಪರಿಹಾರ ನೀಡುವ ಬದ್ಧತೆ ತೋರಿಸಬೇಕು’ ಎಂದರು.

‘ಯುಕೆಪಿ ಅನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ಪ್ರಧಾನಿ ಮೋದಿ ಅವರು ಅನುದಾನ ನೀಡಬೇಕು. ಅನುದಾನ ಕೊಡಿಸುವುದು ಬಿಜೆಪಿ ಅವರ ಕರ್ತವ್ಯ. ಉಪಕಾರಕ್ಕೆ ಕೇಳುತ್ತಿಲ್ಲ’ ಎಂದು ಟೀಕಿಸಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಮೂರು ವರ್ಷಗಳಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ₹75 ಕೋಟಿ ಅನುದಾನ ನೀಡಲಾಗಿದೆ. ಎಸ್ಸಿಪಿಟಿಎಸ್ಪಿಯಲ್ಲೂ ₹9 ಕೋಟಿ ನೀಡಲಾಗಿದೆ. ₹28 ಕೋಟಿ ವೆಚ್ಚದಲ್ಲಿ ಮುಧೋಳ–ಗೋಕಾಕ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ₹35 ಕೋಟಿ ನೀಡಲಾಗುವುದು ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. ₹450 ಕೋಟಿ ವೆಚ್ಚದಲ್ಲಿ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಬಿ.ಬಿ. ಚಿಮ್ಮನಕಟ್ಟಿ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ರಾಜ್ಯ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲಕುಮಾರ ದಡ್ಡಿ, ಬುಡಾ ಅಧ್ಯಕ್ಷ ಅಬ್ದುಲ್ ರಜಾಕ ಬೇನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.