ಬಾಗಲಕೋಟೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2026 ಮಾರ್ಚ್ ಅಂತ್ಯಕ್ಕೆ ವಿವಿಧ ಇಲಾಖೆಗಳು 11.49 ಲಕ್ಷ ಜನರಿಗೆ ಉದ್ಯೋಗ ಗುರಿ ಹೊಂದಿದ್ದವು. ಆದರೆ ಕೇವಲ 5.58 ಲಕ್ಷ (ಶೇ48.56ರಷ್ಟು) ಉದ್ಯೋಗ ನೀಡಿವೆ.

ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ, ಕೊನೆ ತಿಂಗಳುಗಳಲ್ಲಿ ಬಾರದ ಅನುದಾನ, ಮನರೇಗಾ, ವಿಬಿ ರಾಮ್ ಜಿ ಗೊಂದಲದಿಂದಾಗಿ ಗುರಿ ತಲುಪುವಲ್ಲಿ ಇಲಾಖೆಗಳು ವಿಫಲವಾಗಿವೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗುರಿ ಪ್ರಮಾಣ ಕಡಿಮೆಯಾಗಿದೆ. ಆದರೂ, ಗುರಿ ಸಾಧನೆಯಲ್ಲಿ ಇಲಾಖೆಗಳು ಹಿಂದೆ ಬಿದ್ದಿವೆ. ಕೃಷಿ ಇಲಾಖೆಯಲ್ಲಿಯೂ ಗುರಿ ಸಾಧನೆಯಾಗಿಲ್ಲ.

ಅರಣ್ಯ ಬೆಳೆಸಬೇಕು ಎಂದು ವೇದಿಕೆಗಳ ಮೇಲೆ ಹೇಳಲಾಗುತ್ತದೆ. ಉದ್ಯೋಗ ಖಾತ್ರಿಯಡಿ ಅರಣ್ಯ ಬೆಳೆಸಲು ಅವಕಾಶಗಳಿದ್ದರೂ, ಗುರಿ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸಾಮಾಜಿಕ ಅರಣ್ಯ ವಿಭಾಗದಲ್ಲಿ 3.71 ಲಕ್ಷ ದಿನ ಕೆಲಸ ನೀಡುವ ಗುರಿ ನೀಡಲಾಗಿತ್ತು. 1.50 ಲಕ್ಷ ದಿನ ಕೆಲಸ ನೀಡಲಾಗಿದ್ದು, ಶೇ40.46ರಷ್ಟು ಗುರಿ ಸಾಧನೆಯಾಗಿದೆ.

ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ 1.67 ಲಕ್ಷ ದಿನ ಕೆಲಸ ನೀಡುವ ಗುರಿ ಹೊಂದಲಾಗಿತ್ತು. ಕೇವಲ 37 ಸಾವಿರ ದಿನ ಕೆಲಸ ನೀಡಲಾಗಿದ್ದು, ಶೇ21.92ರಷ್ಟು ಮಾತ್ರ ಸಾಧನೆ ಮಾಡಲಾಗಿದೆ.

ಕೃಷಿ ಇಲಾಖೆಯಲ್ಲಿ 3.90 ಲಕ್ಷ ದಿನ ಕೆಲಸ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. 3.05 ಲಕ್ಷ ದಿನ ಕೆಲಸ ನೀಡಲಾಗಿದ್ದು, ಶೇ 78.19ರಷ್ಟು ಸಾಧನೆ ಯಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ 1.50 ಲಕ್ಷ ದಿನ ಕೆಲಸ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. 39 ಸಾವಿರ ದಿನ ಕೆಲಸ ನೀಡಲಾಗಿದ್ದು, ಶೇ26.02ರಷ್ಟು ಸಾಧನೆ ಮಾಡಲಾಗಿದೆ.

ರೇಷ್ಮೆ ಬೆಳೆಯ ಪ್ರಮಾಣ ಕಡಿಮೆ ಇರುವುದರಿಂದ ರೇಷ್ಮೆ ಇಲಾಖೆಗೆ 22 ಸಾವಿರ ಗುರಿ ನೀಡಲಾಗಿತ್ತು. ಕೇವಲ 4 ಸಾವಿರ ಜನರಿಗೆ ಕೆಲಸ ನೀಡಲಾಗಿದ್ದು, ಶೇ 18.92ರಷ್ಟು ಸಾಧನೆಯಾಗಿದೆ. ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆಗೆ 50 ಸಾವಿರ ದಿನ ಗುರಿ ನೀಡಲಾಗಿತ್ತು. ಮಾರ್ಚ್ ಅಂತ್ಯದವರೆಗೆ 23 ಸಾವಿರ ಜನರಿಗೆ ಕೆಲಸ ನೀಡಲಾಗಿದ್ದು, ಶೇ 46.95ರಷ್ಟು ಸಾಧನೆ ಮಾಡಲಾಗಿದೆ.

ಮನರೇಗಾ, ವಿಬಿ ರಾಮ್ ಜಿ ಗೊಂದಲದಿಂದಾಗಿ ಏಪ್ರಿಲ್ ಆರಂಭದಿಂದ ಇಲ್ಲಿಯವರೆಗೆ ಕ್ರಿಯಾ ಯೋಜನೆಗೆ ಅನುಮೋದನ ದೊರೆಯದ್ದರಿಂದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಅಲೆಯುವುದು ಮಾತ್ರ ತಪ್ಪಿಲ್ಲ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-430282078

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.