ಬಾಗಲಕೋಟೆ: ಮುಂಗಾರು ಮಳೆ ರಾಜ್ಯಕ್ಕೆ ಇನ್ನೊಂದು ವಾರದಲ್ಲಿ ಬರಲಿದೆ. ಮುಂಗಾರು ಬಿತ್ತನೆಗೆ ಬೇಕಾದಷ್ಟು ಮಳೆಯಾಗುವವರೆಗೆ ಬಿತ್ತನೆ ಮಾಡದಿರಿ. ಬರ ನಿರೋಧಕ ತಳಿಗಳ ಬಿತ್ತನೆ ಮಾಡುವುದು ಉತ್ತಮ. ಇದು ರೈತರಿಗೆ ಹವಾಮಾನ ಇಲಾಖೆ ನೀಡಿರುವ ಸಲಹೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕೇರಳ ರಾಜ್ಯಕ್ಕೆ ಮುಂಗಾರು ಮಾರುತಗಳು ವಾಡಿಕೆಗಿಂತ ಜೂನ್ 4 ರಿಂದ 5ರ ಆಸುಪಾಸಿಗೆ ಬರಲಿವೆ. ರಾಜ್ಯಕ್ಕೆ ಜೂನ್ 9 ರಿಂದ 10 ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ಬಾರಿ ಮುಂಗಾರಿನ ಮೇಲೆ ಎಲ್ ನಿನೋ ಪರಿಣಾಮ ಇರುವುದರಿಂದ ಕರ್ನಾಟಕದಲ್ಲಿ ಸರಾಸರಿ ವಾರ್ಷಿಕ ವಾಡಿಕೆ ಕಡಿಮೆ ಮಳೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಸೂಕ್ತ ಪ್ರಮಾಣದಲ್ಲಿ ಮಳೆಯಾದ ಮೇಲೆಯೇ ಬಿತ್ತನೆ ಮಾಡಬೇಕು. ಮಳೆ ಕಡಿಮೆಯಾದರೂ ತಾಳಿಕೊಳ್ಳುವಂತಹ ತಳಿ ಹಾಗೂ ಬೆಳೆಗಳ ಆಯ್ಕೆ ಮಾಡಿಕೊಳ್ಳಬೇಕು.

ಏನಿದು ಎಲ್ ನೀನೋ: ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗದಲ್ಲಿ ಸಮುದ್ರ ಮೇಲ್ಮೈ ನೀರಿನ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗುವ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ ಪೆಸಿಫಿಕ್ ಮಹಾಸಾಗರದಲ್ಲಿ ಗಾಳಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತದೆ. ಆದರೆ, ಎಲ್ ನೀನೋ ಸಮಯದಲ್ಲಿ ಈ ಮಾರುತಗಳು ದುರ್ಬಲವಾಗುತ್ತವೆ ಅಥವಾ ದಿಕ್ಕು ಬದಲಾಯಿಸುತ್ತವೆ. ಪಶ್ಚಿಮದಿಂದ ಪೂರ್ವಕ್ಕೆ ಬೀಸುವ ಕಾರಣದಿಂದ ಸಮುದ್ರದ ಬಿಸಿ ನೀರು ಪೂರ್ವ ಭಾಗಕ್ಕೆ ಹರಿದು ಬರುತ್ತದೆ ಎನ್ನುತ್ತಾರೆ ಹವಾಮಾನ ತಜ್ಞ ಬಸವರಾಜ ನಾಗಲೀಕರ್.

ಬಿತ್ತನೆ ಗುರಿ: ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿಟ್ಟರೆ, ಬೇರೆ ಯಾವುದೇ ಬೆಳೆ ಇನ್ನೂ ಬೆಳೆದಿಲ್ಲ.

ಜಿಲ್ಲೆಯಲ್ಲಿ ಗೋವಿನಜೋಳ, ತೊಗರಿ, ಹೆಸರು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. 60 ಸಾವಿರ ಹೆಕ್ಟೇರ್ ಗೋವಿನಜೋಳ, 19 ಸಾವಿರ ಹೆಕ್ಟೇರ್ ಸಜ್ಜೆ, 55 ಸಾವಿರ ಹೆಕ್ಟೇರ್ ತೊಗರಿ, 21 ಸಾವಿರ ಹೆಕ್ಟೇರ್ ಹೆಸರು, 15 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ.

ಮಳೆ ಕೊರತೆ: ಮುಂಗಾರು ಆರಂಭದ ದಿನಗಳಾದ ಮೇ 27 ರಿಂದ ಜೂನ್ 2ರವರೆಗೆ 21.5 ಮಿ.ಮೀ ಮಳೆಯಾಗಬೇಕಿತ್ತು. ಕೇವಲ 7.3 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ 66ರಷ್ಟು ಮಳೆಯ ಕೊರತೆಯಾಗಿದೆ.

ಬೀಳಗಿ, ಮುಧೋಳ, ರಬಕವಿ ಬನಹಟ್ಟಿ, ಜಮಖಂಡಿ, ಬಾಗಲಕೋಟೆ ತಾಲ್ಲೂಕಿನಲ್ಲಿ ಒಂದು ವಾರದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಮಳೆ ಇನ್ನೂ ನಾಲ್ಕಾರು ದಿನಗಳ ಕಾಲ ವಿಳಂಬವಾಗಲಿದೆ.

‘ಬರ ನಿರೋಧಕ ತಳಿ ಆಯ್ಕೆ ಮಾಡಿಕೊಳ್ಳಿ’

ಬಾಗಲಕೋಟೆ: ಮುಂಗಾರು ಮಳೆಯ ಕೊರತೆಯಾಗುವ ನಿರೀಕ್ಷೆ ಇರುವುದರಿಂದ ಆದಷ್ಟು ಬರ ನಿರೋಧಕ
ತಳಿಗಳ ಆಯ್ಕೆ ಮಾಡಿಕೊಳ್ಳಬೇಕು.

ಹೊಲಗಳಲ್ಲಿ ಚೌಕಮಡಿಗಳ ಮಾಡಿ ಮಳೆ
ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಕಬ್ಬು ಹಾಗೂ ಉಳ್ಳಾಗಡ್ಡಿ ಬೆಳೆಗಳಿಗೆ ಸಾಲುಗಳ ನಡುವೆ ಕೃಷಿ ತ್ಯಾಜ್ಯಗಳ ಹೊದಿಕೆ ಮಾಡಿ ನೀರು ಹಾಯಿಸಬೇಕು ಎಂದು ಹವಾಮಾನ ತಜ್ಞ ಬಸವರಾಜ ನಾಗಲಕೀಕರ್
ತಿಳಿಸಿದ್ದಾರೆ.

ಮಾಹಿತಿಗೆ ಬಸವರಾಜ ನಾಗಲೀಕರ್ ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆ (87622 95641, 73490 73144) ಇವರನ್ನು ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.