ಬಾಗಲಕೋಟೆ: ಕೋಟಿ, ಕೋಟಿ ಸುರಿದರೂ ಮುಚಖಂಡಿ ಕೆರೆಯಲ್ಲಿ ಒಂದು ಹನಿ ನೀರಿಲ್ಲ. ಅವೈಜ್ಞಾನಿಕಕಾಮಗಾರಿ, ವಿಳಂಬ ನೀತಿಯಿಂದಾಗಿ ನೀರಿಲ್ಲದೇ ಕೆರೆ, ಖಾಲಿ ಖಾಲಿಯಾಗಿದೆ.

1882ರಲ್ಲಿ ದೂರದೃಷ್ಟಿ ಇಟ್ಟುಕೊಂಡು 720 ಎಕರೆ ಪ್ರದೇಶದಲ್ಲಿ ಬ್ರಿಟಿಷರು ಕೆರೆ ನಿರ್ಮಿಸಿದ್ದಾರೆ. ಕೆರೆ ನಿರ್ಮಿಸಿರುವ ಕಲ್ಲಿನ ಗೋಡೆ ಇಂದಿಗೂ ಗಟ್ಟಿ ಮುಟ್ಟಾಗಿದೆ. 144 ವರ್ಷಗಳು ಕಳೆದರೂ ಸುಭದ್ರವಾಗಿದೆ. ನೀರು ಹರಿದು ಬರುವ ಮೂಲಗಳು ಬಂದ್ ಆಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಕೆರೆ ತುಂಬುತ್ತಿಲ್ಲ.

ಘಟಪ್ರಭಾ ನದಿಯಿಂದ ಕೆರೆ ತುಂಬಿಸಲು ಕೆಲ ವರ್ಷಗಳ ಹಿಂದೆ ₹12 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ಮಾಡಲಾಗಿತ್ತು. ಪಂಪ್ನಿಂದ ನೀರು ಹರಿಸಲಾಯಿತಾದರೂ ರಾವಣ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಯಿತು.

ಘಟಪ್ರಭಾ ನದಿಯಲ್ಲಿ ಹಿನ್ನೀರು ನಿಂತಿರುವಾಗಲೇ ಕೆರೆ ನೀರನ್ನು ಲಿಫ್ಟ್ ಮಾಡಬೇಕು. ನೀರು ಲಿಫ್ಟ್ ಮಾಡುವ ಪೈಪ್ ಸಣ್ಣದಾಗಿದ್ದರಿಂದ ಕೆರೆ ತುಂಬುತ್ತಿಲ್ಲ ಎಂದು ಹೊಸದೊಂದು ಯೋಜನೆ ರೂಪಿಸಲಾಯಿತು.

2023ರಲ್ಲಿ ₹40 ಕೋಟಿಗೂ ಹೆಚ್ಚು ವೆಚ್ಚದಲ್ಲಿ ದೊಡ್ಡದಾದ ಪೈಪ್ಗಳನ್ನು ಅಳವಡಿಸಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಕಾಮಗಾರಿ ಕುಂಟುತ್ತಾ ಸಾಗಿದ್ದು, ಇಂದಿಗೂ ಪೂರ್ಣಗೊಂಡಿಲ್ಲ. ಪರಿಣಾಮ ಕೆರೆ ನೀರಿಲ್ಲದೇ ಖಾಲಿ, ಖಾಲಿಯಾಗಿದೆ.

ಬಾಗಲಕೋಟೆಗೆ ಹೊಂದಿಕೊಂಡಿರುವ ಕೆರೆ ಭರ್ತಿಯಾದರೆ ಬಾಗಲಕೋಟೆ ಸೇರಿದಂತೆ ಹತ್ತಾರು ಹಳ್ಳಿಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಕೆರೆ ಭರ್ತಿಯಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-1724411789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.