ಬಾಗಲಕೋಟೆ: ನವನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ನಾಗರಿಕರು ಸಹಕಾರ ನೀಡಬೇಕು. ಸ್ವಚ್ಛತೆ ವಿಷಯದಲ್ಲಿ ಯಾರೇ ನಿರ್ಲಕ್ಷ್ಯ ಮಾಡಿದರೂ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಎಚ್ಚರಿಸಿದರು.

ನವನಗರದ ಸೆಕ್ಟರ್ ನಂ.35ರಲ್ಲಿ ಬಿಟಿಡಿಎದಿಂದ ಶುಕ್ರವಾರ ಆರಂಭಿಸಿದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿದ್ದಾಗ ಮಾತ್ರ ಸಾಂಕ್ರಾಮಿಕ ರೋಗಗಳಿಂದ ದೂರ ಇರಲು ಸಾಧ್ಯ. ನವನಗರ ಯುನಿಟ್-1 ಮತ್ತು 2ರಲ್ಲಿ ಸ್ವಚ್ಛತಾ ಸಪ್ತಾಹ ಆರಂಭಿಸಲಾಗಿದೆ. ಪ್ರತಿಯೊಂದು ಸೆಕ್ಟರ್ ಸ್ವಚ್ಛವಾಗಿರಬೇಕು. ಇದಕ್ಕಾಗಿ ಬಿಟಿಡಿಎ ಅಧಿಕಾರಿಗಳು, ಕಸ ಸಂಗ್ರಹದ ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಗುತ್ತಿಗೆದಾರರು ಕಡ್ಡಾಯವಾಗಿ ತಮಗೆ ವಹಿಸಿದ ಸೆಕ್ಟರ್ಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಸ್ವಚ್ಛತೆ ವಿಷಯದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಕೆಲವರು, ಕಸ, ನಿರುಪಯುಕ್ತ ಬಟ್ಟೆ, ಮುಸುರಿಯನ್ನು ಚರಂಡಿಗೆ ಹಾಕುತ್ತಾರೆ. ಕಸ ಸಂಗ್ರಹದ ವಾಹನ ಬಂದರೂ, ಚರಂಡಿಗೆ ಕಸ ಹಾಕುವವರ ಮೇಲೆ ನಿಗಾ ಇಡಬೇಕು. ತಿಳಿವಳಿಕೆ ಹೇಳಿದ ಬಳಿಕವೂ ಚರಂಡಿಗೆ ಕಸ ಹಾಕವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.

ಬಿಟಿಡಿಎ ಮುಖ್ಯ ಎಂಜಿನಿಯರ್ ಚಂದ್ರಹಾಸ ಬಂಡಿ, ಎಂಜಿನಿಯರ್ಗಳಾದ ಎಸ್.ಎಸ್. ಕರಿಗಾರ, ವೈ.ಬಿ. ಪಾತ್ರೋಟಿ, ಅಧಿಕಾರಿಗಳಾದ ಸುರೇಶ ತೆಗ್ಗಿ, ಸೋಮಲಿಂಗ ನೋಟಗಾರ, ಪ್ರಶಾಂತ ಲೋಕಾಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-19-287291904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.