ಬಾಗಲಕೋಟೆ: ಕುಟುಂಬದ ಸದಸ್ಯರ ಸಾವಿನ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದವರು, ನಂತರ ನಡೆದ ಸಾರ್ವಜನಿಕ ಚುನಾವಣೆಯಲ್ಲಿ ಸೋತ ಉದಾಹರಣೆಗಳು ಜಿಲ್ಲೆಯಲ್ಲಿವೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ, ಅವರು ಅನುಕಂಪದ ಅಲೆಯ ಗೆಲುವನ್ನು ಸೋಲಾಗಿ ಪರಿವರ್ತಿಸಿದ್ದಾರೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನರಾದ ಹಿನ್ನಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಉಮೇಶ ಮೇಟಿ, ಅನುಕಂಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಗೆಲುವು ಸಾಧಿಸಿದ್ದಾರೆ. ಗೆದ್ದವರು ಎಡವಿದರೆ ಸೋಲಿನ ಸುಳಿಗೆ ಸಿಲುಕುತ್ತಾರೆ.

ಜಿಲ್ಲೆಯಲ್ಲಿ ಒಂಬತ್ತು ಉಪ ಚುನಾವಣೆಗಳು ನಡೆದಿದ್ದು, ಅದರಲ್ಲಿ ಐದು ಉಪ ಚುನಾವಣೆಗಳು ಶಾಸಕರು ನಿಧನರಾದ ಹಿನ್ನೆಲೆಯಲ್ಲಿ ನಡೆದಿವೆ. ಆ ಐದರಲ್ಲಿ ಮೂರು ಚುನಾವಣೆಗಳಲ್ಲಿ ನಿಧನರಾದ ಶಾಸಕರ ಕುಟುಂಬದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಅನುಕಂಪ ಮತ್ತು ಸರ್ಕಾರದ ಬಲದೊಂದಿಗೆ ಸುಲಭವಾಗಿ ಗೆಲುವಿನ ದಡ ಮುಟ್ಟಿದ್ದಾರೆ.

ಹುನಗುಂದ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಕಂಡು ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಆರ್.ಕಾಶಪ್ಪನವರ ನಿಧನದಿಂದ 2003ರಲ್ಲಿ ಉಪ ಚುನಾವಣೆ ನಡೆಯಿತು. ಆಗ ಜಿಲ್ಲೆಯಲ್ಲಿ ಮೊದಲ ಭಾರಿಗೆ ಕಾಂಗ್ರೆಸ್ ನಿಧನರಾದ ಶಾಸಕರ ಕುಟುಂಬಕ್ಕೆ ಟಿಕೆಟ್ ನೀಡಿತ್ತು. ಎಸ್.ಆರ್.ಕಾಶಪ್ಪನವರ ಪತ್ನಿ ಗೌರಮ್ಮ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ವಿರುದ್ಧ 10,297 ಮತಗಳಿಂದ ಗೆಲುವು ಸಾಧಿಸಿದ್ದರು.

ಮರು ವರ್ಷವೇ ನಡೆದ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೌರಮ್ಮ ಕಾಶಪ್ಪನವರ ಅವರನ್ನೇ ಕಣಕ್ಕಿಳಿಸಿತ್ತು. ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲರ ವಿರುದ್ಧ 18,193 ಮತಗಳಿಂದ ಸೋತಿದ್ದರು.

2018ರ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಸತತ ಎರಡು ಸಲ ಗೆಲುವು ಕಂಡಿದ್ದ ಶಾಸಕ ಸಿದ್ದು ನ್ಯಾಮಗೌಡ ಕೆಲವೇ ತಿಂಗಳುಗಳಲ್ಲಿ ಅಪಘಾತದಲ್ಲಿ ನಿಧನರಾದರು. ಉಪಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತು. ಬಿಜೆಪಿ ಅಭ್ಯರ್ಥಿ ವಿರುದ್ಧ ಆನಂದ ಅವರು, 39,480 ಮತಗಳಿಂದ ಜನರು ಗೆಲ್ಲಿಸಿದ್ದರು.

2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ವಿರುದ್ಧ 4,716 ಮತಗಳಿಂದ ಸೋಲಿಸಿದರು.

ಉಪಚುನಾವಣೆಯಲ್ಲಿ ಸರ್ಕಾರದ ಬಲ ಇವರೊಂದಿಗೆ ಮೇಲಿನ ಮೂವರೊಂದಿಗೆ ಇತ್ತು. ಜತೆಗೆ ರಾಜಕೀಯಕ್ಕೆ ಹೊಸಬರಾಗಿದ್ದ ಇವರನ್ನು ಹಿಂಬಾಲಕರು ಹಾದಿ ತಪ್ಪಿಸುವುದೇ ಹೆಚ್ಚು. ಅಧಿಕಾರ ಏರಿರುವ ಅವರಿಗೂ ಸತ್ಯದ ಮಾತುಗಳು ರುಚಿಸುವುದಿಲ್ಲ. ಇತಿಹಾಸದ ಪುಟಗಳನ್ನು ಅರಿಯದಿದ್ದರೆ ಜನರೇ ನಿರ್ಧರಿಸಲಿದ್ದಾರೆ.

ಕುಟುಂಬ ಹಸ್ತಕ್ಷೇಪ ಮನೆಗೇ ಸೀಮಿತವಾಗಿರಲಿ

ಬಾಗಲಕೋಟೆ: ಮೂರನೇ ವ್ಯಕ್ತಿಯ ಹಸ್ತಕ್ಷೇಪ, ಕುಟುಂಬದವರ ಮೂಗು ತೂರಿಸುವಿಕೆ, ನಿಮ್ಮನ್ನು ಬೇಟಿಯಾಗಲು ಮತ್ತೊಬ್ಬರ ಮಧ್ಯಸ್ಥಿಕೆಯಿಲ್ಲದಂತೆ ಮಾಡಿ, ಶಾಸಕರು ನೇರವಾಗಿ ಜನರಿಗೆ ಸಿಗುವಂತಾಗಬೇಕು ಎಂಬುದು ಜನರ ಆಶಯ.

ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ ಮೇಟಿ ಅವರ ಕುಟುಂಬದ ಸದಸ್ಯರಿಂದಲೇ ಚುನಾವಣೆ ಮುನ್ನ, ನಂತರದಲ್ಲೂ ಆಕ್ಷೇಪ ಕೇಳಿ ಬರುತ್ತಿದೆ. ಹಸ್ತಕ್ಷೇಪವಿಲ್ಲದ ನೇರ ಆಡಳಿತದ ನಿರೀಕ್ಷೆಯಲ್ಲಿ ಜನರಿದ್ದಾರೆ. ಈ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ, ಕುಟುಂಬದವರೇ ಬಂಡಾಯ ಏಳುವ ಲಕ್ಷಣಗಳಿವೆ.

ಆಡಳಿತದಲ್ಲಿ ಕುಟುಂಬದವರನ್ನು ದೂರವಿಡುವ ವಿಷಯದಲ್ಲಿ ಎಚ್.ವೈ. ಮೇಟಿ ಅವರನ್ನು ಅನುಸರಿಸಬೇಕಾದ ಅವಶ್ಯಕತೆ ಇದೆ. ನಿಮ್ಮ ಹಾಗೂ ಸಾರ್ವಜನಿಕರ ನಡುವಿನ ಮಧ್ಯವರ್ತಿಗಳನ್ನು ತೆಗೆದು ಹಾಕಬೇಕು ಎಂಬುದು ಜನರ ಆಶಯವಾಗಿದೆ. ಇಲ್ಲವಾದರೆ, ಜನರೇ ಮುಂದಿನ ನಿರ್ಧಾರ ಮಾಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-924014671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.