ಬಾಗಲಕೋಟೆ: ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಶೇ97ರಷ್ಟು ಬಿಲ್ ಪಾವತಿ ಮಾಡಿದ್ದು, ಬಾಕಿ ಬಿಲ್ ಅನ್ನು ವಾರದಲ್ಲಿ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ, ಕಾರ್ಖಾನೆಗಳಿಗೆ ಮಾಲೀಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜರುಗಿದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಘೋಷಿಸಿದ ಎಫ್ಆರ್ಪಿ ದರದಂತೆ ಹಾಗೂ ಸರ್ಕಾರದ ಆದೇಶದಂತೆ ಮೊದಲ ಕಂತಿನಲ್ಲಿ ಶೇ97 ರಷ್ಟು ಬಿಲ್ ಪಾವತಿ ಮಾಡಿದ್ದಾರೆ. ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರ ಆದೇಶದಂತೆ 2025-26ನೇ ಹಂಗಾಮಿಗೆ ಕಬ್ಬು ಪೂರೈಸಿದ ರೈತರಿಗೆ ಹೆಚ್ಚುವರಿಯಾಗಿ ಘೋಷಿಸಿದ ಪ್ರತಿ ಮೆಟ್ರಿಕ್ ಟನ್ಗೆ ₹50ರಂತೆ ₹83.54 ಕೋಟಿ ಪೈಕಿ ಈಗಾಗಲೇ ಮೊದಲ ಕಂತಾಗಿ ₹69.60 ಕೋಟಿ ಸರ್ಕಾರ ಬಿಡುಗಡೆ ಮಾಡಿದೆ. ಎರಡನೇ ಕಂತು ₹13.94 ಕೋಟಿ ಬಿಡುಗಡೆಯಾಗಿದ್ದು, ಎರಡು ದಿನಗಳಲ್ಲಿ ಕಾರ್ಖಾನೆಗಳಿಗೆ ಜಮೆ ಆಗಲಿದೆ ಎಂದರು. ಕಾರ್ಖಾನೆಗಳು ಸಹ ಹೆಚ್ಚುವರಿ ಪ್ರತಿ ಮೆಟ್ರಿಕ್ ಟನ್ಗೆ ನೀಡಬೇಕಾದ ₹50 ಸೇರಿಸಿ, ಪ್ರತಿ ಮೆಟ್ರಿಕ್ ಟನ್ಗೆ ₹100 ರೈತರಿಗೆ ಜಮೆ ಮಾಡತಕ್ಕದ್ದು. ಈಗಾಗಲೇ ಇಐಡಿ ಪ್ಯಾರಿ (ಇಂಡಿಯಾ ಲಿ) ಹಾಗೂ ಉತ್ತೂರಿನ ಇಂಡಿಯನ್ ಕೇನ್ ಪಾವರ್ ಲಿಮಿಟೆಡ್ನವರು ಪಾವತಿ ಮಾಡಿರುತ್ತಾರೆ. ಉಳಿದ ಕಾರ್ಖಾನೆಗಳೂ ತುರ್ತಾಗಿ ರೈತರಿಗೆ ಪಾವತಿ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಕಬ್ಬು ಪೂರೈಸಿದ ರೈತರಿಗೆ ನಿಗದಿತ ಅವಧಿಯೊಳಗೆ ಬಿಲ್ ಪಾವತಿಯಾಗಬೇಕು. ಪಾವತಿಗೆ ವಿಳಂಬ ಧೋರಣೆ ಅನುಸರಿಸುವಂತಿಲ್ಲ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಿಲ್ಲಾ ಪರಿಸರ ಮಾಲಿನ್ಯ ಅಧಿಕಾರಿ ಅನೀಲಕುಮಾರ ಚಳಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.