ಬಾಗಲಕೋಟೆ: ಕಬ್ಬು ಪೂರೈಸಿದಂತಹ ರೈತರ ಬಾಕಿ ಮೊತ್ತವನ್ನು ಜೂನ್ ಮೊದಲ ವಾರದೊಳಗೆ ಪಾವತಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಬ್ಬು ಪೂರೈಸಿದ ರೈತರ ಬಾಕಿ ಮೊತ್ತ ₹203 ಕೋಟಿಯನ್ನು ಯಾವುದೇ ಕಾರಣ ನೀಡದೇ ಶೀಘ್ರದಲ್ಲಿ ಪಾವತಿಸತಕ್ಕದ್ದು ಎಂದರು.

ಸರ್ಕಾರದಿಂದ ರೈತರಿಗೆ ಪ್ರತಿ ಟನ್ನಿಗೆ ₹50 ರಂತೆ ಈಗಾಗಲೇ ಬಿಡುಗಡೆ ಮಾಡಿ, ರೈತರ ಖಾತೆಗೆ ಜಮಾ ಮಾಡಲಾಗಿದೆ. ಕಾರ್ಖಾನೆ ವತಿಯಿಂದಲೂ ಪ್ರತಿ ಟನ್ಗೆ ₹50 ರಂತೆ ಅಂದಾಜು 82 ಕೋಟಿಯನ್ನು ಸಹ ಜೂನ್ ಮೊದಲ ವಾರದಲ್ಲಿಯೇ ಪಾವತಿಸಬೇಕು ಎಂದು ಎಚ್ಚರಿಸಿದರು.

ರೈತರಿಗೆ ಪಾವತಿಸಬೇಕಾದ ಮೊತ್ತವನ್ನು ವಿಳಂಬ ಮಾಡದೇ ಸಕಾಲದಲ್ಲಿ ಪಾವತಿಸಿ, ರೈತರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಜಿಲ್ಲಾಡಳಿತಕ್ಕೂ ಸಮಸ್ಯೆ ಉಂಟಾಗಿ ಜಿಲ್ಲೆಗೆ ಕಪ್ಪು ಚುಕ್ಕೆ ಬೀಳುತ್ತದೆ ಎಂದರು.

ಬಾಗಲಕೋಟೆ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ಮಾಡಬೇಕಾದರೆ ಕಾರ್ಖಾನೆಯವರ ಸಹಕಾರ ಅತ್ಯಗತ್ಯವಾಗಿದೆ. ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ (ಸಿಎಸ್ ಆರ್) ಯಡಿ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಪರಿಸರ ದಿನವಾದ ಜೂನ್ 5 ರಂದು ಸಸಿಗಳನ್ನು ನೆಡಲು ಮುಂದಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಅಕ್ಕ–ಪಕ್ಕದ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳ ಮಾಲೀಕರು ಈಗಾಗಲೇ ಬಾಕಿ ಮೊತ್ತ ಪಾವತಿಸಿದ್ದು, ಜಿಲ್ಲೆಯಲ್ಲಿಯೂ ರೈತರಿಗೆ ಬಾಕಿ ಮೊತ್ತ ಶೀಘ್ರ ಪಾವತಿಸಬೇಕು. ಮುಷ್ಕರ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಆಹಾರ, ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-19-1410368891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.