ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ಗೆ ₹7,721 ರಂತೆ ಪ್ರತಿ ಎಕರೆಗೆ ಗರಿಷ್ಠ ನಾಲ್ಕು ಕ್ವಿಂಟಲ್ ಎಫ್.ಎ.ಕ್ಯೂ ಸೂರ್ಯಕಾಂತಿ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.

ಗುಣಮಟ್ಟದ ಸೂರ್ಯಕಾಂತಿ ಖರೀದಿಗೆ ಜಿಲ್ಲೆಯಲ್ಲಿ 17 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೋಂದಣಿ ಪ್ರಕ್ರಿಯೆ ಆದೇಶದ ದಿನಾಂಕದಿಂದ 50 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 60 ದಿನಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನೂ ಪ್ರಾರಂಭಿಸಲಾಗುವುದು ಎಂದರು.

ಪ್ರತಿ ಕ್ವಿಂಟಲ್ಗೆ ಕಲ್ಮಶಗಳು ಶೇ 2ರಷ್ಟು, ಒಡೆದ ಬೀಜಗಳು ಶೇ 3ರಷ್ಟು, ಹಾನಿಗೊಳಗಾದ ಮತ್ತು ಜೇರುಂಡೆ ಬೀಜಗಳು ಶೇ 4ರಷ್ಟು ಅಪಕ್ವ, ಕುಗ್ಗಿದ ಬೀಜಗಳು ಶೇ 5ರಷ್ಟು ಹಾಗೂ ತೇವಾಂಶ ಶೇ 9ರಷ್ಟಿರಬೇಕು. ನೋಂದಣಿಗಾಗಿ ಆಧಾರ್ ಕಾರ್ಡ್, ಪಹಣಿ ಪತ್ರಿಕೆ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ಬುಕ್ ಪ್ರತಿ ಸಲ್ಲಿಸಿ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬೇಕು. ಮಾರಾಟ ಮಾಡಲು ಹಾಗೂ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಾಗಲಕೋಟೆ (99005 53056), ಸಹಾಯಕ ನಿರ್ದೇಶಕರು ಎಪಿಎಂಸಿ, ಬಾಗಲಕೋಟೆ (90353 53912) ಇವರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಎಪಿಎಂಸಿ ಸಹಾಯಕ ನಿರ್ದೇಶಕ ಬಿ.ಎಸ್.ಬಾವಿಹಾಳ, ವಿವಿಧ ಎಪಿಎಂಸಿ ಕಾರ್ಯದರ್ಶಿಗಳಾದ ರವಿ ರಾಠೋಡ, ರತ್ನಾಕರ ಎ.ವೈ, ದೇವರಾಜ ಪಟ್ಟಣಶೆಟ್ಟಿ, ಆರ್.ಎಂ.ದಂಡಿನ, ವಿ.ಡಿ.ಪಾಟೀಲ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು.

ಖರೀದಿ ಕೇಂದ್ರಗಳ ವಿವರ: ಬಾಗಲಕೋಟೆ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಖಜ್ಜಿಡೋಣಿ (99011 06360), ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (73538 61868), ಬಾದಾಮಿ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ (96118 59963), ಕೆಂದೂರ (94804 10494), ನಂದಿಕೇಶ್ವರ (76249 51919), ಪಿ.ಕೆ.ಪಿ.ಎಸ್ ಕೆರೂರ (99723 01729), ಮುಧೋಳ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ (70225 44942), ಬೀಳಗಿ ತಾಲ್ಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ (96322 89239), ಟಿ.ಎ.ಪಿ.ಸಿ.ಎಂ.ಎಸ್ ಬೀಳಗಿ (70196 82890), ಹುನಗುಂದ ತಾಲ್ಲೂಕಿನ ಟಿ.ಎ.ಪಿ.ಸಿ.ಎಂ.ಎಸ್ (94802 62655), ಎಫ್ಪಿಒ ಸೂಳೇಭಾವಿ (94497 62433), ಜಮಖಂಡಿ ತಾಲ್ಲೂಕಿನ ಟಿ.ಎ.ಪಿ.ಸಿ.ಎಂ.ಎಸ್ (94489 20992), ಇಳಕಲ್ ತಾಲ್ಲೂಕಿನ ಪಿ.ಕೆ.ಪಿ.ಎಸ್, ನಂದವಾಡಗಿ (9902377067), ಪಿ.ಕೆ.ಪಿ.ಎಸ್ ಕರಡಿ (9110402689) ಹಾಗೂ ಜಿಎಫ್ಪಿಸಿಎಲ್ ಇಳಕಲ್ (86602 03311).

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-1729493029

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.