ಬಾಗಲಕೋಟೆ: ತಾಲ್ಲೂಕಿನ ತುಳಸಿ ಗೇರಿಯ ಆಂಜನೇಯನ ಓಕಳಿ ಸಂಭ್ರಮದಿಂದ ಸೋಮವಾರ ಸಂಪನ್ನಗೊಂಡಿತು.

ಶುಕ್ರವಾರದಿಂದ ಆರಂಭವಾಗಿದ್ದ ಆಂಜನೇಯ ಓಕಳಿ ಕಾರ್ಯ ಗ್ರಾಮದ ಯುವಕರು ಹೊಂಡದಲ್ಲಿ ಜಿಗಿದು ನೀರಾಟ ಆಡುವ ಮೂಲಕ ಸಂಭ್ರಮದಿಂದ ಮುಕ್ತಾಯವಾಯಿತು. ಹೊಂಡದಲ್ಲಿ ಮಿಂದೆದ್ದರು.

ಸೋಮವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಗ್ರಾಮದ ಜನರು ಸೇರಿದರು. ಪಲ್ಲಕ್ಕಿ ಹಾಗೂ ಹನಮಪ್ಪನ ಕುದುರೆಯನ್ನು ಹೊಂಡದ ಸುತ್ತ ಐದು ಸುತ್ತು ಹಾಕಿಸಲಾಯಿತು. ಅದಾದ ಮೇಲೆ ಹಂದರದ ಮುಂದೆ ಪೂಜಾ ವಿಧಿ-ವಿಧಾನಗಳು ನಡೆದವು.

ಓಕಳಿ ಹೊಂಡಕ್ಕೆ ದೇವಸ್ಥಾನದ ಪೂಜಾರಿಗಳು ಪೂಜೆ ಸಲ್ಲಿಸಿದ ನಂತರ ಮೊದಲೇ ನಿರ್ಧಾರವಾಗಿದ್ದ ಐವರು ಗಂಡು ಮುತ್ತೈದೆಯರು ಹೊಂಡದ ನೀರು ತೆಗೆದುಕೊಂಡು ಹೋಗಿ ಆಂಜ ನೇಯ ಹಾಗೂ ಬೆನ್ನಪ್ಪನಿಗೆ ಮುಟ್ಟಿಸಿ ಬಂದರು.

ನಂತರ ಮತ್ತೇ ನೀರು ತೆಗೆದುಕೊಂಡು ಹೋಗಿ ಊರ ಒಳಗಿನ ಕೊತ್ತಲಪ್ಪ ದೇವರಿಗೆ ಮುಟ್ಟಿಸಿ ಬಂದು ಹೊಂಡ ಮುಟ್ಟಿದ ತಕ್ಷಣವೇ ಯುವಕರು ನಾ ಮುಂದು, ತಾ ಮುಂದು ಎಂದು ಹೊಂಡದಲ್ಲಿ ಜಿಗಿದು ಓಕಳಿಯಾಡಿ ಸಂಭ್ರಮಿಸಿದರು. ನೋಡಲು ನಿಂತಿದ್ದ ಜನರೆಲ್ಲ ಗೋವಿಂದ… ಗೋವಿಂದ… ಗೋವಿಂದ ಎಂದು ಘೋಷಣೆ ಕೂಗುತ್ತಿದ್ದರು.

‘ದೇವಸ್ಥಾನಗಳಿಂದ ಭಕ್ತಿಯ ಭಾವನೆ ಜಾಗೃತ’

ಮಹಾಲಿಂಗಪುರ: ‘ಮನೆಗಳಿಗೆ ಕಳಸ ಇರುವುದಿಲ್ಲ. ಆದರೆ, ದೇವಸ್ಥಾನಕ್ಕೆ ಕಳಸ ಇರಲೇಬೇಕು. ಇದರಿಂದ ದೇವಸ್ಥಾನದ ಗುರುತು ಹಿಡಿಯಲು ಸಾಧ್ಯ. ದೇವಸ್ಥಾನಗಳು ಭಕ್ತಿಯ ಭಾವನೆ ಜಾಗೃತಗೊಳಿಸುತ್ತವೆ’ ಎಂದು ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಜವಳಿ ಬಜಾರ್ನಲ್ಲಿ ಮಲ್ಲೆಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಯಲ್ಲಮ್ಮದೇವಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ಧರ್ಮಸಭೆ ಸಾನಿಧ್ಯ ವಹಿಸಿ ಮಾತನಾಡಿ ದರು.

ರನ್ನಬೆಳಗಲಿಯ ಸಿದ್ಧರಾಮ ಶಿವಯೋಗಿ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ‘ಮನೆ, ಗ್ರಾಮ ಪಟ್ಟಣಗಳು ಅಭಿವೃದ್ಧಿ ಹೊಂದಲು ಹಿರಿಯರ ಅನುಭವ ಬೇಕು’ ಎಂದು ಹೇಳಿದರು.

ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿದ್ಯಾಧರ ಸವದಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಬಿ.ಡಿ.ಸೋರಗಾಂವಿ ಮಾತನಾಡಿದರು. ಶಂಕರಗೌಡ ಪಾಟೀಲ, ಅಲ್ಲಪ್ಪ ಗುಂಜಿಗಾಂವಿ ಇದ್ದರು.

ಮರೆಗುದ್ದಿ ಅಡವಿಸಿದ್ಧೇಶ್ವರ ಮಠದ ನಿರುಪಾಧೀಶ ಸ್ವಾಮೀಜಿ ನೇತೃತ್ವದಲ್ಲಿ ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಇದಕ್ಕೂ ಮುನ್ನ ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-19-1380432841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.