ಬಾಗಲಕೋಟೆ: ಹುನಗುಂದ ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಬಳಿಯ ಗೋಮಾಳದಲ್ಲಿನ ಮಣ್ಣು ತೆಗೆಯಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

‘ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಮಣ್ಣು ತೆಗೆಯಲು ಬಂದಿರುವುದನ್ನು ಮಂಗಳವಾರ ತಡೆದಿದ್ದೇವೆ. ಕೂಡಲೇ ನೀವು ನೀಡಿರುವ ಆದೇಶವನ್ನು ಹಿಂಪಡೆದು, ಗೋಮಾಳವನ್ನು ರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿ ಪ್ರತಿಭಟನಕಾರರು ಘೋಷಣೆ ಕೂಗಿದರು.

‘ಹೊನ್ನರಹಳ್ಳಿ ಮಾತ್ರವಲ್ಲದೇ ಚಿಕ್ಕಯರನಗೇರಿ, ಬೇವಿನಮಟ್ಟಿ, ಹಿರೇಯರನಕೇರಿ ಗ್ರಾಮಗಳ ಜಾನುವಾರುಗಳಿಗೆ ಈ ಗೋಮಾಳವೇ ಆಶ್ರಯವಾಗಿದೆ. ಆದ್ದರಿಂದ ಮಣ್ಣು ತೆಗೆಯುವುದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಎತ್ತು, ಹಸು, ಎಮ್ಮೆ, ಮೇಕೆ ಮುಂತಾದ ಜಾನುವಾರುಗಳನ್ನು ಅಲ್ಲಿಯೇ ಮೇಯಿಸಲಾಗುತ್ತದೆ. ಈಗ ಮಣ್ಣು ತೆಗೆದರೆ ಹುಲ್ಲುಗಾವಲು ಇಲ್ಲದಂತಾಗಿ ತೊಂದರೆಯಾಗುತ್ತಿದೆ. ಗೋವು ರಕ್ಷಣೆ ಮಾಡಿ ಎಂದು ಹೇಳುತ್ತೀರಿ. ಮೇವು ಇಲ್ಲದಿದ್ದರೆ, ರಕ್ಷಣೆ ಮಾಡುವುದು ಹೇಗೆ’ ಎಂದು ಪ್ರಶ್ನಿಸಿದರು.

‘ಈ ಪ್ರದೇಶದಲ್ಲಿ ಈಗಾಗಲೇ ಹಲವು ಗಿಡಗಳು ಬೆಳೆದು ನಿಂತಿವೆ. ಕಳೆದ ವರ್ಷ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಲ್ಲಿನ ಮಣ್ಣನ್ನು ತೆಗೆಯುವುದರಿಂದ ಸಸಿಗಳು ಹಾಳಾಗುತ್ತವೆ’ ಎಂದು ತಿಳಿಸಿದರು.

‘ಅಮೃತ ಮಿಷನ್ ಯೋಜನೆಯಡಿ ಕೆಳಭಾಗದಲ್ಲಿ ಕೆರೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಅದಕ್ಕೂ ಈ ಕಾಮಗಾರಿ ಅಡ್ಡಿಯಾಗುತ್ತಿದೆ. ಐದು ಹಳ್ಳಿಗಳ ಜಾನುವಾರುಗಳಿಗೆ ತೊಂದರೆಯಾಗುತ್ತದೆ’ ಎಂದು ಮುಖಂಡ ಶಿವಣ್ಣ ದೂರಿದರು.

ವೀರಪ್ಪ ಮಾಗಿ, ಮಹಾಂತಪ್ಪ ಅಳ್ಳೊಳ್ಳಿ, ಸಂಗನಬಸಯ್ಯ, ಅಂದಾನಪ್ಪ ಕೊಣ್ಣೂರ, ಶರಣಯ್ಯ, ಗುರುಬಸಪ್ಪ, ಮೃತ್ಯುಂಜಯ್ಯ ಹಿರೇಮಠ ಮತ್ತಿತರರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ‘ಗೋಮಾಳ ನೀಡಿರುವುದನ್ನು ಪರಿಶೀಲನೆ ಮಾಡಲಾಗುವುದು. ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದರೆ, ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-19-1308666159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.