ರಬಕವಿ ಬನಹಟ್ಟಿ: ಇಲ್ಲಿನ ಲಕ್ಷ್ಮಿ ನಗರದ ಚರಂಡಿಯ ತ್ಯಾಜ್ಯವನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿ ‘ಪ್ರಜಾವಾಣಿ’ಯಲ್ಲಿ ಸೆ.5ರಂದು ಕುಂದು ಕೊರತೆ ವಿಭಾಗದಲ್ಲಿ ಪ್ರಕಟಗೊಂಡಿದ್ದ ವರದಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸಿ, ತ್ಯಾಜ್ಯ ತೆರವು ಮಾಡಿದ್ದಾರೆ.
ಗುರುವಾರ ಮತ್ತು ಶುಕ್ರವಾರ ಚರಂಡಿಯನ್ನು ಸ್ವಚ್ಛಗೊಳಿಸಿದ ಸಿಬ್ಬಂದಿ ತ್ಯಾಜ್ಯವನ್ನು ಬೇರೆ ಕಡೆಗೆ ಸಾಗಿಸಿದ್ದಾರೆ. ನಗರಸಭೆಯ ಆರೋಗ್ಯಾಧಿಕಾರಿ ಸಂಗೀತಾ ಕೋಳಿ, ಬಸಪ್ಪಗೋಳ, ಬಡಾವಣೆಯ ಶಶಿಕಾಂತ ಹುನ್ನೂರ ಇದ್ದರು.