ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಬಗ್ಗೆ ಚರ್ಚಿಸಲು ಅಮಿತ್ ಶಾ ಭೇಟಿಗೆ ನಿರ್ಧಾರ: ಜಯಮೃತ್ಯುಂಜಯ ಸ್ವಾಮೀಜಿ

Last Updated 14 ಜನವರಿ 2021, 7:05 IST
ಅಕ್ಷರ ಗಾತ್ರ

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ನಿಧ೯ರಿಸಿರುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾಡ ದೊರೆಗಳಿಗೆ (ಬಿ.ಎಸ್.ಯಡಿಯೂರಪ್ಪ) ಅವರಿಗೆ ಹೇಳಿ ಹೇಳಿ ಸಾಕಾಗಿದೆ, ಇನ್ನು ದೇಶದ ದೊರೆಗಳಿಗೆ ಹೇಳುತ್ತೇವೆ ಎಂದರು.

ಪಂಚಮಸಾಲಿ ಲಿಂಗಾಯತರೆಂದರೆ ನಾಲ್ಕೇ ಜನರಲ್ಲ, ಬದಲಾಗಿ ಲಕ್ಷ ಲಕ್ಷ ಜನರಿದ್ದೇವೆ.ಅದನ್ನು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿ ಕೊಡುತ್ತೇವೆ. ನಮ್ಮ ಸಮಾಜದ ನಾಯಕ ಮುರುಗೇಶ ನಿರಾಣಿ ಅವರ ಕಾಯ೯ಕ್ರಮಕ್ಕೆ ಅಮಿತ್ ಶಾ ಬರುತ್ತಿದ್ದಾರೆ.

ಈ ವೇಳೆ ಅವರನ್ನು ಭೇಟಿಯಾಗಿ ಕೇಂದ್ರದಲ್ಲಿ ಬಿಜೆಪಿ ಸಕಾ೯ರ ಬರಲು ಪಂಚಮಸಾಲಿ ಸಮುದಾಯದವರ ಪಾತ್ರ ದೊಡ್ಡದಿದೆ ಅನ್ನೋದನ್ನ ತಿಳಿಸುತ್ತೇವೆ ಎಂದರು.

ನಮ್ಮ ಸಮುದಾಯಕ್ಕೆ ಮೀಸಲಾತಿ ಅವಶ್ಯಕತೆ ಬಗ್ಗೆ ಅವರಿಗೆ ಮನವರಿಕೆ ಮಾಡಿ ಕೊಡುತ್ತೇವೆ.

'ನಾವು ಸಮಾಧಾನವಾಗಿಲ್ಲ, ಎದ್ದು ನಿಂತರೆ ವೀರಭದ್ರ ಇದ್ದಂತೆ.ಮೀಸಲಾತಿ ಸಿಗೋವರೆಗೆ ವಿರಮಿಸೋ ಮಾತಿಲ್ಲ.

ನಿನ್ನೆ ನನ್ನ ಮೇಲಿನ ಅತಿಯಾದ ನಂಬಿಕೆಯಿಂದ ಸಚಿವ ಮುರುಗೇಶ ನಿರಾಣಿ ಅವರು ಆತುರವಾಗಿ ಮಾತನಾಡಿದ್ದಾರೆ.

ನಿರಾಣಿ ಅವರು ಸಿಎಂ ಮತ್ತು ಪಂಚಮಸಾಲಿ ಸಮುದಾಯದ ಮಧ್ಯೆ ಸೇತುವೆಯಾಗಿ ಕಾಯ೯ ನಿವ೯ಹಿಸಿ ಸಮಸ್ಯೆ ಬಗೆಹರಿಸಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT