ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸಿಎಂ ಅವಧಿಯಲ್ಲೇ ಬಸವಣ್ಣನಿಗೆ ಅಗೌರವ: ಜಯಮೃತ್ಯುಂಜಯ ಶ್ರೀ ವಾಗ್ದಾಳಿ

Last Updated 3 ಜೂನ್ 2022, 9:21 IST
ಅಕ್ಷರ ಗಾತ್ರ

ಕೂಡಲಸಂಗಮ: ಲಿಂಗಾಯತ ಮುಖ್ಯಮಂತ್ರಿ ಅವಧಿಯಲ್ಲಿಯೇ ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನಿಗೆ ಅಗೌರವ ಮಾಡುವ ಪ್ರಯತ್ನ ನಡೆಯುತ್ತಿರುವುದು ಆಘಾತ ಉಂಟುಮಾಡಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶುಕ್ರವಾರ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,‌ ಮುಖ್ಯಮಂತ್ರಿ‌ಅವರು ಲಿಂಗಾಯತ ಮಠಾಧೀಶರ ಸಭೆ ಕರೆದು ಬಸವಣ್ಣನ ಕುರಿತು ಆದ ತಪ್ಪುಗಳನ್ನು ಸರಿಪಡಿಸಬೇಕು ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಬಸವಣ್ಣನ ಅನುಯಾಯಿ, ಅವರಿಗೆ ಕಳಂಕ ತರುವ ಹುನ್ನಾರ ಇದರಲ್ಲಿ ಇದೆ ಎಂಬ ಸಂಶಯ ಲಿಂಗಾಯತರಲ್ಲಿ ಮೂಡಿದೆ. ಲಿಂಗಾಯತ ಶಾಸಕರು ಕೂಡಲೇ ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರುವ ಮೂಲಕ ಬಸವಣ್ಣನ ಇತಿಹಾಸವನ್ನು ಮಕ್ಕಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

2ಎ ಮೀಸಲಾತಿಗಾಗಿ ಆಗ್ರಹಿಸಿ ರಾಜ್ಯದಾದ್ಯಂತ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಮ್ಮಿಕೊಳ್ಳುವ ಸತ್ಯಾಗ್ರಹಕ್ಕೆ ಜೂನ್ 27 ರಂದು ಹಾವೇರಿ ಜಿಲ್ಲೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಮುಂದೆ ಚಾಲನೆ ನೀಡಲಾಗುವುದು. ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಸತ್ಯಾಗ್ರಹಕ್ಕೆ ಚಾಲನೆ ಕೊಡುವರು. ಜೂನ್ 11 ರಿಂದ 26ರ ವರೆಗೆ ಹಾವೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಜ್ಞಾ ಪಂಚಾಯಿತಿ ಜಾಗೃತಿ ಹಕ್ಕೊತ್ತಾಯ ಮಾಡಲಾಗುವುದು.

ಪಂಚಮಸಾಲಿ ಸಮಾಜದ ಆಡಳಿತ ಪಕ್ಷದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ಅಂತಿಮ ಮಾತುಕತೆ ನಡೆಸಿ ಮೀಸಲಾತಿ ಕೊಡಲು ಆಗುತ್ತದೆಯೋ ಇಲ್ಲ ಎಂದು ಸ್ಪಷ್ಟವಾಗಿ ಕೇಳಬೇಕು ಎಂದು ಶ್ರೀಗಳು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT