ಬೀಳಗಿ: ಅಖಾಡದಲ್ಲಿ ಪೈಲ್ವಾನರು ಪಟ್ಟುಗಳ ಮೂಲಕ ಪ್ರತಿಸ್ಪರ್ಧಿಗಳನ್ನು ಚಿತ್ ಮಾಡಿದರೆ ಇತ್ತ ಚಪ್ಪಾಳೆ ಹೊಡೆದು ಕೇಕೆ ಹಾಕಿದರು. ಇನ್ನೊಂದೆಡೆ ಗೆದ್ದ ಪೈಲ್ವಾರನ್ನು ಬೆಂಬಲಿಗರು ಭುಜದ ಮೇಲೆ ಹೊತ್ತುಕೊಂಡು ಅಖಾಡ ಸುತ್ತಾಡಿ ಸಂಭ್ರಮಿಸಿದರು.

ಇಂಥದ್ದೊಂದು ಕ್ಷಣಗಳಿಗೆ ತಾಲ್ಲೂಕಿನ ನಾಗರಾಳ ಗ್ರಾಮ ಸೋಮವಾರ ಸಾಕ್ಷಿಯಾಯಿತು. ಕಪ್ಪರ ಪಡಿಯಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಂಗಿ ಕುಸ್ತಿ ಸ್ಪರ್ಧೆ ಜನರ ಕಣ್ಮನ ಸೆಳೆದವು.

ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿ ಸ್ಪರ್ಧೆ ಪ್ರಮುಖವಾದುದು. ಇದನ್ನು ಕಣ್ಮುಂಬಿಕೊಳ್ಳಲೆಂದೆ ಜನ ಸೋಮವಾರ ಸಾಯಂಕಾಲ ಕುಸ್ತಿ ಅಖಾಡದ ಸುತ್ತುವರಿದಿದ್ದರು. ಅವರನ್ನು ನಿಯಂತ್ರಿಸುವುದೇ ಪೊಲೀಸರು ಹಾಗೂ ಆಯೋಜಕರಿಗೆ ತಲೆ ನೋವಾಗಿತ್ತು.

ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದ ಗಡಿ ಭಾಗಗಳಿಂದಲೂ ಕುಸ್ತಿಪಟುಗಳು ಪಾಲ್ಗೊಂಡಿದ್ದರು, 5ರಿಂದ 50 ವರ್ಷದ ವರಗಿನವರಿಗೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಆರಂಭದಲ್ಲಿ ಚಿಣ್ಣರು ತಮ್ಮ ಕಲೆ ಪ್ರದರ್ಶಿಸಿ ಗಮನ ಸೆಳೆದರು.ಯುವಕರ ಕುಸ್ತಿ ಸ್ಪರ್ಧೆಗಳಲ್ಲಿ ಬಿರುಸಿನ ಪೈಪೋಟಿ ನಡೆಯಿತು.

ಮಠದ ಪೀಠಾಧಿಪತಿ ಶೇಷಪ್ಪಯ್ಯ ಸ್ವಾಮೀಜಿ, ನಿಯೋಜಿತ ಶ್ರೀಗಳಾದ ನಿಂಗಪ್ಪಯ್ಯ ಸ್ವಾಮೀಜಿ ಗ್ರಾಮದ ಹಿರಿಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-19-1754679332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.