ಬೀಳಗಿ: ‘ನಕಲಿ ಛಾಯಾಗ್ರಾಹಕರು ಹಾಗೂ ಮೊಬೈಲ್ ಛಾಯಾಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ವೃತ್ತಿಪರ ಛಾಯಾಗ್ರಾಹಕರ ಬದುಕು ದುಸ್ತರವಾಗಿದೆ. ಸರ್ಕಾರ ಕೂಡಲೇ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಬೀಳಗಿ ತಾಲ್ಲೂಕು ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ಗಳ ಸಂಘ ಒತ್ತಾಯಿಸಿದೆ.

ಇಲ್ಲವಾದಲ್ಲಿ ರಾಜ್ಯದಾದ್ಯಂತ ಛಾಯಾಗ್ರಾಹಕರು ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ‘ವಿಜಯಪುರ ಜಿಲ್ಲೆಯ ಆಲಮಟ್ಟಿ ಉದ್ಯಾನದಲ್ಲಿ ₹500 ಇದ್ದ ಪ್ರವೇಶ ಶುಲ್ಕವನ್ನು ಈಗ ₹2,500ಕ್ಕೆ ಏರಿಕೆ ಮಾಡಿರುವುದು ವೃತ್ತಿಪರ ಛಾಯಾಗ್ರಾಹಕರ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವೃತ್ತಿಪರ ಛಾಯಾಗ್ರಾಹಕರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕ್ಯಾಮೆರಾಗಳು, ಲೈಟಿಂಗ್ ವ್ಯವಸ್ಥೆಗಳು ಹಾಗೂ ಇತರ ಆಧುನಿಕ ಉಪಕರಣಗಳನ್ನು ಖರೀದಿಸುತ್ತಾರೆ. ಒಂದು ಛಾಯಾಚಿತ್ರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲು ಕನಿಷ್ಠ ಐದು ಜನರ ಶ್ರಮ ಹಾಗೂ ಹಲವು ತಾಂತ್ರಿಕ ಸಾಧನಗಳ ಅವಶ್ಯಕತೆ ಇರುತ್ತದೆ. ಇಷ್ಟೆಲ್ಲ ಹೂಡಿಕೆ ಮತ್ತು ಶ್ರಮದ ಬಳಿಕವೂ ಹೆಚ್ಚಿನ ಲಾಭ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಮೊಬೈಲ್ ಫೋನ್ಗಳ ಮೂಲಕ ಕಡಿಮೆ ವೆಚ್ಚದಲ್ಲಿ ಛಾಯಾಚಿತ್ರಣ ನಡೆಸುವವರ ಸಂಖ್ಯೆ ಹೆಚ್ಚುತ್ತಿರುವುದು ವೃತ್ತಿಪರರ ಬದುಕಿಗೆ ಧಕ್ಕೆಯಾಗಿದೆ’ ಎಂದರು.

‘ಒಂದು ಫೋಟೊ ಸ್ಟುಡಿಯೊ ಆರಂಭಿಸಲು ತಾಲ್ಲೂಕು ಛಾಯಾಗ್ರಾಹಕರ ಸಂಘದ ಸದಸ್ಯತ್ವ ಪಡೆದು ನಿಯಮಾನುಸಾರ ಶುಲ್ಕ ಪಾವತಿಸಬೇಕು. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ಬಾಡಿಗೆ ಹಾಗೂ ಠೇವಣಿ ನೀಡಿ ಉದ್ಯಮ ಆರಂಭಿಸಬೇಕಾಗುತ್ತದೆ. ಆದರೂ ಸರ್ಕಾರದ ದೃಷ್ಟಿಯಲ್ಲಿ ಅಸಂಘಟಿತ ಕಾರ್ಮಿಕರಾಗಿರುವ ಛಾಯಾಗ್ರಾಹಕರಿಗೆ ಸಮರ್ಪಕ ಸೌಲಭ್ಯಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಿಯಂತ್ರಣವಿಲ್ಲದ ಮೊಬೈಲ್ ಹಾಗೂ ನಕಲಿ ಛಾಯಾಗ್ರಾಹಕರ ಹಾವಳಿ ಮಧ್ಯ ವೃತ್ತಿಪರರ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ’ ಎಂದು ಕಳವಳ ವ್ಯಕ್ತ ಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹನಮಂತ ಕಾಳಪ್ಪಗೋಳ, ಕಾರ್ಯದರ್ಶಿ ಹನಮಂತ ದೊಡಮನಿ, ಕಿರಣ ನಾಯ್ಕರ, ಸದಸ್ಯರಾದ ಶ್ರೀಶೈಲ ದೊಡಮನಿ, ಶ್ರವಣ ಸುರಗಿಮಠ, ಸಿದ್ದು ಮಾದರ, ಸಿದ್ದು, ಸಚಿನ್ ಹಿರೇಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-19-1007673488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.