ಬೀಳಗಿ: ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆ ದ್ಯಾಮಮ್ಮ ದೇವಿಗೆ ಹರಕೆ ತೀರಿಸಲು ವಾರ ಹಿಡಿದು ಭಕ್ತಿ ಭಾವದಿಂದ ದೇವರನ್ನು ಬೇಡಿಕೊಳ್ಳುವುದು ಹಾಗೂ ಉಡಿತುಂಬುವ ಕಾರ್ಯ ನೆರವೇರಿತು.

ಪಟ್ಟಣದಲ್ಲಿ 11 ವಾರ ನಿರಂತರ ಪೂಜೆ ಸಲ್ಲಿಸಿ, ತಾಯಿ ದ್ಯಾಮಮ್ಮನನ್ನು ಈ ವರ್ಷದ ಮಳೆ ಬೆಳೆ ಸಂಪದ್ಭರಿತವಾಗಿ ಪಡೆದುಕೊಳ್ಳುವ ಉದ್ದೇಶದಿಂದ ಹಿಂದಿನ ಕಾಲದಿಂದ ನಡೆದು ಬಂದ ಪದ್ದತಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೊರಟಿರುವುದು ರೈತರ ಮತ್ತು ಹಿರಿಯರ ಕಾರ್ಯವಾಗಿದೆ.

ಪಟ್ಟಣದಲ್ಲಿ ಐದು ಮಂಗಳವಾರ ಆರು ಶುಕ್ರವಾರ ಭಕ್ತಿ ಭಾವದಿಂದ ತಾಯಿಯ ಉಡಿತುಂಬುವ ಕಾರ್ಯದ ಪದ್ಧತಿಯಂತೆ ರೈತರು ಹೊಲಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಅದರ ಸಂಕೇತವಾಗಿ ಎತ್ತುಗಳನ್ನು ಹೂಡುವುದಿಲ್ಲ. ಮನೆಯಲ್ಲಿ ರೊಟ್ಟಿ ಸಹ ಮಾಡದೆ ವಾರ ಮಾಡುತ್ತ ಬಂದಿರುವುದು ವೈಶಿಷ್ಟವಾಗಿದೆ. ಗ್ರಾಮದ ಹಿರಿಯರು, ಯುವಕರು ಕೊನೆಯ ಮಂಗಳವಾರ ದ್ಯಾಮಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-19-1327376045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.