ಬೀಳಗಿ: ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ರಸ್ತೆ ಮೂಲಕ ಹೋಗುವ ಸಾರ್ವಜನಿಕರಿಗೆ ನೀರಿನ ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಿ.ಎಂ.ಸಾವಕಾರ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಎದುರು ಫಾರುಕ್ ಹುಡೇದ ಹಾಗೂ ಅವರ ನೇತೃತ್ವದಲ್ಲಿ ಸಿದ್ಧಗೊಳಿಸಿದ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿ ಮಾತನಾಡಿದರು.

ಪಾರುಕ್ ಹುಡೇದ ಮಾತನಾಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಪ್ರತಿನಿತ್ಯ ಬರುವ ಜನರಿಗೆ ಕುಡಿಯುವ ನೀರಿನ ದಾಹ ನಿಗಿಸುವ ಉದ್ದೇಶದಿಂದ ನಾನು ನನ್ನ ಸ್ನೇಹಿತ ಅಲ್ಲಾಭಕ್ಷ ಜಮಖಂಡಿ ಈ ಪ್ರಯತ್ನ ಮಾಡುತ್ತಿದ್ದೇವೆ. ಬೇಸಿಗೆಯಿಂದಾಗಿ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋದರೆ ಬಾಯಾರಿಕೆ ಆಗುತ್ತದೆ. ಬೇಸಿಗೆಯಲ್ಲಿ ಜನರ ನೀರಿನ ಬವಣೆ ನಿಗಿಸಲು ಅರವಟಿಗೆ ಆರಂಭಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಬೀಳಗಿ ಕ್ರಾಸ್ನ ಕನಕ ವೃತ್ತದ ಸಮೀಪ ಹಾಗೂ ಬಸ್ ನಿಲ್ದಾಣದ ಎದುರು ಎರಡು ಎರಡು ಅರವಟ್ಟಿಗೆ ನಿರ್ಮಾಣ ಮಾಡಿದ್ದು ಸಾರ್ವಜನಿಕರು ಅಲ್ಲಿರುವ ಹರವಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೀರನ್ನು ಬಳಸಿಕೊಳ್ಳಲು ಅಲ್ಲಾಭಕ್ಷ ಜಮಖಂಡಿ ವಿನಂತಿಸಿದರು.

ಪತ್ರಕರ್ತ ಆನಂದ ಜಡಿಮಠ ಮಾತನಾಡಿದರು.

ಮಂಜುಳಾ ಮೇರಾಕಾರ,ಹನಮಂತ ಚಿಗರನ್ನವರ , ಹುಸೇನ್ ಬಾಲಾಗಾವಿ, ಲಾಲ್ ಸಾಬ್ ಮಕಾಂದರ, ಜಾವೀದ ಕಲೆಗಾರ, ಶರಣಪ್ಪ ಹಡಪದ, ರಫೀಕ್ ಮುಲ್ಲಾ, ಅಲೀಮ್ ತೆಗ್ಗಿ, ಕುತುಬುದ್ದಿನ್ ಮುಲ್ಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-19-248006639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.