ಬೀಳಗಿ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗುರು ಹಜರತ್ ಪೀರ್ ಹಸನ್ಡೋಂಗ್ರಿ ಸಾಹೇಬ್ ದರ್ಗಾದ ಉರುಸ್ ಮೇ 16ರಿಂದ ಐದು ದಿನ ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.

ಹಿಂದೂ–ಮುಸ್ಲಿಂ ಸೌಹಾರ್ದದ ಪ್ರತೀಕವಾಗಿರುವ ಈ ಜಾತ್ರೆಯಲ್ಲಿ ಬೀಳಗಿ ಹಾಗೂ ಬಾಡಗಂಡಿ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಸಮುದಾಯದ ಜನರು ಭಕ್ತಿ, ಭಾವ ಮತ್ತು ಸಹೋದರತ್ವದೊಂದಿಗೆ ಪಾಲ್ಗೊಳ್ಳುತ್ತಾರೆ.

ದರ್ಗಾದಲ್ಲಿ ನಡೆಯುವ ಹಲವು ಆಚರಣೆಗಳು ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳ ಸಮ್ಮಿಲನದಲ್ಲಿ ನಡೆಯುವುದು ಈ ಕ್ಷೇತ್ರದ ವಿಶೇಷತೆ. ಇಲ್ಲಿನ ಹಲವು ಪೂಜಾ–ಪದ್ದತಿಗಳನ್ನು ಹಿಂದೂ ಅರ್ಚಕರೇ ನೆರವೇರಿಸುತ್ತಾರೆ.

ಮೇ 16 ರಂದು ರಾತ್ರಿ 10.30ಕ್ಕೆ ಬೀಳಗಿಯಿಂದ ಗಂಧದ ಮೆರವಣಿಗೆ ನಡೆಯಲಿದೆ. ವಾದ್ಯ ವೈಭವಗಳೊಂದಿಗೆ ಕಣವಿ ಮನೆತನದವರಿಂದ ಗಂಧದ ಮೆರವಣಿಗೆ ಹೊರಟು ಮೇ 17ರ ಬೆಳಿಗ್ಗೆ 4.30ಕ್ಕೆ ಗಂಧ ಲೇಪನ ಕಾರ್ಯಕ್ರಮ ಜರುಗಲಿದೆ.

ಮೇ 17 ರಂದು ರಾತ್ರಿ 7.30ಕ್ಕೆ ಜಾನಪದ ಕಲಾ ಪ್ರದರ್ಶನ ನಡೆಯಲಿದ್ದು, ಜಂಗ್ಲೀಸಾಬ ಮೀರಾಸಾಬ ಟಗರನ್ನವರ ಮತ್ತು ಸಂಗಡಿಗರಿಂದ ರಿವಾಯತ್ ಪದಗಳು ನಡೆಯಲಿವೆ. ರಾತ್ರಿ 10.30ಕ್ಕೆ ಶಿವಲಿಂಗೇಶ್ವರ ಕಲಾ ನಾಟ್ಯ ಸಂಘ ಕುಲ್ಲಳ್ಳಿ ಅವರಿಂದ “ಅಗಲಿ ಹೋದ ಅಣ್ಣ ತಮ್ಮ” ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

ಮೇ 18 ರಂದು ಸಂಜೆ 4 ಗಂಟೆಗೆ ಜಂಗೀ ಕುಸ್ತಿ, ಮಲ್ಲಕಂಬ ಮತ್ತು ಪಗಡಿ ಪಂದ್ಯಾವಳಿ ನಡೆಯಲಿದ್ದು, ಸಂಜೆ 6 ಗಂಟೆಗೆ ತುಳಸಿಗಿರಿ ಗ್ರಾಮದವರಿಂದ ಮಲ್ಲಕಂಬ ಪ್ರದರ್ಶನ ಜರುಗಲಿದೆ. ರಾತ್ರಿ 10 ಗಂಟೆಗೆ ಹೊನಲು ಬೆಳಕಿನ ಪಾರಂಪರಿಕ ಪಗಡಿ ಪಂದ್ಯಾವಳಿಗಳು ನಡೆಯಲಿದ್ದು, ಪ್ರಥಮ ಬಹುಮಾನ ₹25,001, ದ್ವಿತೀಯ ₹15,001, ತೃತೀಯ ₹10,001, ಚತುರ್ಥ ₹7,001 ನಿಗದಿಪಡಿಸಲಾಗಿದೆ. ಪ್ರವೇಶ ಶುಲ್ಕ ₹1,001 ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.ಸಂ 7204022420 ಹಾಗೂ 8431631363 ಸಂಖ್ಯೆಗೆ ಸಂಪರ್ಕಿಸಬಹುದು.

ಮೇ 19 ರಂದು ಬೆಳಿಗ್ಗೆ 8 ಗಂಟೆಯಿಂದ ಚೀಲ ಹೊತ್ತು ಓಡುವ ಹಾಗೂ ಕಲ್ಲು ಸಿಡಿ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ₹5,001, ದ್ವಿತೀಯ ₹3,001, ತೃತೀಯ ₹2,001, ಚತುರ್ಥ ₹1,001 ಇರಲಿದೆ. ಪ್ರವೇಶ ಶುಲ್ಕ ₹101 ಆಗಿದ್ದು, ಎಲ್ಲಾ ಬಹುಮಾನಗಳನ್ನು ಜಾತ್ರಾ ಕಮಿಟಿಯವರು ನೀಡಲಿದ್ದಾರೆ. ಸಂಜೆ 4 ಗಂಟೆಗೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಸ್ಪರ್ಧೆ ನಡೆಯಲಿದ್ದು, ಪ್ರಥಮ ₹5,001,ದ್ವಿತೀಯ ₹3,001, ತೃತೀಯ ₹2,001,ಚತುರ್ಥ ₹1,001 ಬಹುಮಾನ ನೀಡಲಾಗುವುದು. ಈ ಸ್ಪರ್ಧೆಗಳ ಬಹುಮಾನಗಳನ್ನು ಭರಮಪ್ಪ ನಿಂ. ಗುಳಬಾಳ, ಡೊಂಗ್ರೆಪ್ಪ ಸಾ.ಕಣವಿ, ಅರ್ಜುನ ಹರಡೊಳ್ಳಿ ಹಾಗೂ ಗಿರೀಶ್ ಶಂಕ್ರಪ್ಪ ಭಾವಿ ಪ್ರಾಯೋಜಿಸಿದ್ದಾರೆ.

ಜಾತ್ರೆ ಆರಂಭದ ದಿನದಿಂದ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 10ಗಂಟೆವರೆಗೆ ಅನ್ನಸಂತರ್ಪಣೆ ವ್ಯವಸ್ಥೆ ಇರಲಿದೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-506966180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.