ಬೀಳಗಿ: ಹೇಮರಡ್ಡಿ ಮಲ್ಲಮ್ಮ ಅವರ ತತ್ವಾದರ್ಶವನ್ನು ಸಮಾಜದ ಪ್ರತಿಯೊ ಬ್ಬರು ಪಾಲಿಸಬೇಕು, ಅವರು ಸ್ತ್ರೀ ಕುಲದ ಅನರ್ಘ್ಯರತ್ನ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಹೇಮರಡಿ ಮಲ್ಲಮ್ಮಳ 604ನೇ ಜಯಂತ್ಯೋತ್ಸವದ ನಿಮಿತ್ತ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾ ಡಿದ ಗುರೂಜಿ ಮಲ್ಲಮ್ಮ ಹಾಕಿಕೊಟ್ಟ ಜೀವನದ ಮಾರ್ಗ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯವಾಗಿದೆ ಎಂದು ಬಣ್ಣಿಸಿದರು.ಮಲ್ಲಮ್ಮ,ತಮ್ಮ ಬದುಕಿನಲ್ಲಿ ಸುಖ, ದುಃಖ ಸಮಾನವಾಗಿ ಸ್ವೀಕರಿಸಿ. ಮಹಾಸಾಧನೆ ಮಾಡಿದವರು. ಸಮಸ್ಥಿತಿಯಲ್ಲಿ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದು ತಾಳ್ಮೆಗೆ ಇನ್ನೊಂದು ಹೆಸರೇ ಮಲ್ಲಮ್ಮ ಅವರು ಸ್ತ್ರೀ ಕುಲಕ್ಕೆ ಪ್ರೇರಣೆಯಾಗಿದ್ದರು ಎಂದರು.

ಸಾನಿಧ್ಯ ವಹಿಸಿದ ಅನಗವಾಡಿ ಶ್ರದ್ದಾನಂದ ಬ್ರಹನ್ಮಠದ ಮಾತೋಶ್ರೀ ಅನುಸೂಯ ತಾಯಿ ಆಶೀರ್ವಚನ ನೀಡಿ ದರು. ರಡ್ಡಿ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಕುಲ್ ಬೆಳ್ಳುಬ್ಬಿ, ಬೆನಕಟ್ಟಿಯ ಹೇಮ ವೇಮ ಸದ್ಭೋದನ ಪೀಠದ ಕಾರ್ಯದರ್ಶಿ ಪಾಂಡುರಂಗ ಸಣ್ಣಪ್ಪನವರ ಹಾಗೂ ಹಿರಿಯ ವಕೀಲ ಎಂ.ಬಿ.ಭೂಸರಡ್ಡಿ ಮಾತನಾಡಿದರು.

ಶ್ರೀಮಂತ ಶರತ್ ಚಂದ್ರ ದೇಸಾಯಿ ಉದ್ಘಾಟಿಸಿದರು, ಹೇಮ ವೇಮ ಜನಸೇವಾ ಸಮಿತಿಯ ಗೌರವಾಧ್ಯಕ್ಷ ರಮೇಶ ಭೂಸರಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಜಗದೀಶ ಸುರೇಶ ಭೂಸರಡ್ಡಿ ಸ್ವಾಗತಿಸಿದರು. ಸಂಗಮೇಶ ಪಾಟೀಲ ವಂದಿಸಿದರು. ಸುರೇಶ ರಾಮಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಣ್ಣ ಭೂಸರಡ್ಡಿ ನಿರೂಪಿಸಿದರು.

ಸುಮಾರು 350ಕ್ಕೂ ಹೆಚ್ಚು ಮಹಿಳೆ ಯರು ಕುಂಭ ಹಾಗು ಆರತಿ ಹಿಡಿದು ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಸಾಗಿದ ದೃಶ್ಯ ಆಕರ್ಷಣೀಯವಾಗಿತ್ತು. ಶತಾಯುಷಿ ಸಿದ್ದಪ್ಪ ಹರೆನ್ನವರ ಬಾಗಲಕೋಟೆ ವಿವಿ ರಾಜೇಶ್ವರಿ ದೇಸಾಯಿ ಬಿಎಸ್ಸಿಯಲ್ಲಿ ಚಿನ್ನದ ಪದಕ ಪಡೆದ ಪ್ರಯುಕ್ತ ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ 90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಮಾಜದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-19-1485371699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.