ಬೀಳಗಿ: ಪರಂಪರಾಗತವಾಗಿ ಆಚರಿಸಿಕೊಂಡು ಬರುತ್ತಿರುವ ಹಬ್ಬ, ಹರಿದಿನಗಳು ತಮ್ಮದೇ ಇತಿಹಾಸ ಹೊಂದಿವೆ. ಹೀಗಾಗಿ ಪೂರ್ವಜರು ಅವುಗಳನ್ನು ಆಚರಿಸಿಕೊಂಡು ಬಂದಿದ್ದಾರೆ. ಹಬ್ಬ ಹರಿದಿನಗಳು ಸರ್ವಜನಾಂಗದ ಒಗ್ಗಟ್ಟಿನ ಸಂಕೇತವಾಗಿವೆ ಎಂದು ಸಿಪಿಐ ಹನಮಂತ ಸಣಮನಿ ಹೇಳಿದರು.

ಬೀಳಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೊಳಿ ಉತ್ಸವ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಹಲಗೆ ಹಬ್ಬ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೀಳಗಿ ತಾಲ್ಲೂಕು ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರವೀಣಗೌಡ ಪಾಟೀಲ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ಮಾಯವಾಗುತ್ತಿವೆ. ಎಲ್ಲರೂ ಜಾತಿ, ಭೇದ ಹಾಗೂ ಪಕ್ಷಭೇದ ಮರೆತು ಸೌಹಾರ್ದದಿಂದ ಹೋಳಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ ಮಾತನಾಡಿ, ‘ಆಧುನಿಕತೆಯ ಅಬ್ಬರದಲ್ಲಿ ಸಂಪ್ರದಾಯಗಳು ಮರೆಯಾಗುತ್ತಿವೆ .ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಾ, ಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಕಾಮದಹನದ ಸಂಕೇತವಾಗಿ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಸುಟ್ಟು ಹಾಕಬೇಕು’ ಎಂದು ತಿಳಿಸಿದರು.

ಲ್ಯಾಂಡ್ ಡೆವಲಪರ್ಸ್ ಸಂತೋಷ ಕೊಲಾರ ಮಾತನಾಡಿದರು. ಸೋಮಪ್ಪಯ್ಯನ ಮಠದ ಚನ್ನಬಸವ ಸ್ವಾಮೀಜಿ, ಪೆಂಡಾಲ್ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಣ ತೋಟದ, ಸುಭಾಷ ಮೇರಾಕರ, ವಿಶ್ವನಾಥ ಕರಣಿ, ಹೋಳಿ ಉತ್ಸವ ಕಮಿಟಿಯ ಅಧ್ಯಕ್ಷ ವಿಠ್ಠಲ್ ಕಂದಗಲ, ಸಂಚಾಲಕ ಸದಾಶಿವ ಕೆರೂರ, ಪ್ರವೀಣ ಅಂಬೋರೆ ಇದ್ದರು.

ಬುಧವಾರ ಬೆಳಿಗ್ಗೆಯಿಂದ ಯುವಕರು ಚಿಣ್ಣರು ಬಣ್ಣದೋಕುಳಿ ನಡೆಸಿದರು. ಹಲಗೆ ಬಾರಿಸುತ್ತ ತಮ್ಮ ಸ್ನೇಹಿತರ ಮನೆಗೆ ತೆರಳಿ ಬಣ್ಣ ಹಚ್ಚಿದರು. ಮಧ್ಯಾಹ್ನ 2 ಗಂಟೆವರೆಗೂ ರಂಗಿನಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.