ಬೀಳಗಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಿದ್ದೇಶ್ವರ ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಹಲವು ದಿನಗಳಿಂದ ಕೆಟ್ಟು ಕುಂತಿದ್ದು, ಇಲ್ಲಿನ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

2022ನೇ ಸಾಲಿನಲ್ಲಿ 15ನೇ ಹಣಕಾಸಿನಲ್ಲಿ ನಿರ್ಮಾಣವಾದ ಈ ಶುದ್ದ ಕುಡಿಯುವ ನೀರಿನ ಘಟಕ ಸುಮಾರು 10,00 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಈ ಘಟಕವು ಬಳಕೆಯಾಗಿದ್ದಕ್ಕಿಂತ ಕೆಟ್ಟು ನಿಂತ ದಿನಗಳೇ ಹೆಚ್ಚು. ಮೇಲಿಂದ ಮೇಲೆ ಬೇರೆ ಬೇರೆ ಕಾರಣಗಳಿಂದ ಕೆಟ್ಟು ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಅದು ಕೆಟ್ಟು ನಿಂತ ಮೇಲೆ ಸಾಕಷ್ಟು ಬಾರಿ ದುರಸ್ತಿ ಮಾಡಿಸಿದರು ಸಾರ್ವಜನಿಕರ ಅದರ ಸದ್ಬಳಕೆ ಮಾಡಿಕೊಳ್ಳದೆ ಇರುವುದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟಕದಿಂದ ಶುದ್ಧ ಕುಡಿಯುವ ನೀರು ಸಿಗದೇ ಇರುವ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ.ಸದ್ಯ ಈ ವಾರ್ಡ್ನ ಜನರು ಕುಡಿಯುವ ನೀರಿಗಾಗಿ ಶಿವಾಜಿ ವೃತ್ತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವಲಂಬಿಸಿದ್ದಾರೆ.ವಾಹನ ಹೊಂದಿದವರು ದೂರದಿಂದ ನೀರು ತರುತ್ತಾರೆ, ವಾಹನ ಇಲ್ಲದವರು ಏನು ಮಾಡಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಘಟಕ ಕೆಟ್ಟು ಒಂದು ವಾರ ಗತಿಸಿದ ಪರಿಣಾಮ ಜನರು ನೆತ್ತಿ ಸುಡುವ ಬಿಸಿಲಿನಲ್ಲಿ ಬೇರೆ ಕಡೆಯಿಂದ ನೀರು ತರುವುದು ಮಾತ್ರ ತಪ್ಪಿಲ್ಲ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.