ಬೀಳಗಿ: ‘ಮನೆ, ಕುಟುಂಬ, ಸುಖ– ಸಂತೋಷ ತ್ಯಾಗ ಮಾಡಿ, ಗಡಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ, ದೇಶಪ್ರೇಮವು ಸದಾ ಸ್ಮರಣೀಯ’ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಹೇಳಿದರು.

22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವಗ್ರಾಮವಾದ ತಾಲ್ಲೂಕಿನ ಇನಾಂಹಂಚಿನಾಳ ಗ್ರಾಮಕ್ಕೆ ಆಗಮಿಸಿದ ಯಲ್ಲಪ್ಪ ಗುಂಡಪ್ಪ ಬಬಲೇಶ್ವರ ಅವರ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಯೋಧರ ಪರಿಶ್ರಮವಿದೆ. ಯುವಜನರು ದುಶ್ಚಟಗಳಿಗೆ ದಾಸರಾಗದೆ ದೇಶ, ಸಮಾಜ ಸೇವೆಯಲ್ಲಿ ನಿರತರಾಗಬೇಕು’ ಎಂದು ಹೇಳಿದರು.

‘ನಿವೃತ್ತ ಯೋಧರು ಮುಂದೆಯೂ ಗ್ರಾಮದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ, ಶಿಕ್ಷಣದ ಕಾಳಜಿ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಬದಲಾವಣೆ ತರಬೇಕು’ ಎಂದು ತಿಳಿಸಿದರು.

ಯುವ ಮುಖಂಡ ಲಕ್ಷ್ಮಣ ನಿರಾಣಿ ಮಾತನಾಡಿ, ‘ಸೈನಿಕರು ಹಗಲು ರಾತ್ರಿಯೆನ್ನದೆ ದೇಶದ ಗಡಿ ಕಾಯುತ್ತಿರುವುದರಿಂದ ನಾವೆಲ್ಲರೂ ದೇಶದೊಳಗೆ ಸುರಕ್ಷಿತವಾಗಿದ್ದೇವೆ. ಯೋಧರ ಸೇವೆ ಅವಿಸ್ಮರಣೀಯ. ಅಂತಹ ಯೋಧರನ್ನು ತವರಿನಲ್ಲಿ ಗೌರವಿಸುವುದು ಹೆಮ್ಮೆಯ ವಿಷಯ’ ಎಂದರು.

ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಸಿ. ಕೊಮಾರದೇಸಾಯಿ ಮಾತನಾಡಿದರು. ಮುಖಂಡರಾದ ರುದ್ರಪ್ಪ ನಿರಾಣಿ, ಈರಪ್ಪ ಕೋಟಿ, ಗುಂಡಪ್ಪ ತಂಬಾಕದ, ರಮೇಶ ಹಳ್ಳಿ, ರುದ್ರಪ್ಪ ತಂಬಾಕದ, ಪುಂಡಲೀಕ ಗಾಣಿಗೇರ ಇದ್ದರು. ಶೇಖರ ಗೊಳಸಂಗಿ, ಎಸ್.ಎಂ. ನಾಗನೂರು ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-19-177072875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.