ಬೀಳಗಿ: ‘ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕು ಮತ್ತು ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು, ನಿಗದಿತ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕ ಜೆ.ಟಿ. ಪಾಟೀಲ ತಿಳಿಸಿದರು.

2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಬಂಡವಾಳ ವೆಚ್ಚ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗಲಗಲಿ-ಗಣಿ ಜಿಲ್ಲಾ ಮುಖ್ಯ ರಸ್ತೆ ಹಾಗೂ ಚಿಕ್ಕಹಂಚಿನಾಳದಿಂದ ಲಿಂಗನೂರ ಜಿಲ್ಲಾ ಮುಖ್ಯರಸ್ತೆ ವರೆಗೆ ರಸ್ತೆ ಸುಧಾರಣೆ ಮತ್ತು ಉಮರಾಣಿ ಗಲಗಲಿ ರಾಜ್ಯ ಹೆದ್ದಾರಿ ವರೆಗೆ ರಸ್ತೆ ಸುಧಾರಣೆ, ಚಿಕ್ಕಹಂಚಿನಾಳ ಕ್ರಾಸ್ನಲ್ಲಿ ಬಸ್ ನಿಲ್ದಾಣ ನಿರ್ಮಾಣ, ಗಲಗಲಿಯ ರಾಚೋಟೇಶ್ವರ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಜಿ.ಎಸ್.ಅರಳಿಕಟ್ಟಿ, ಪಿಡ್ಬ್ಯೂಡಿ ಅಧಿಕಾರಿ ಮಂಜುನಾಥ ತೆಗ್ಗಿ ಕಾಂಗ್ರೆಸ್ ಮುಖಂಡ ಎಸ್.ಟಿ. ಪಾಟೀಲ,ಈಶ್ವರ ಪುರಾಣಿಕ, ಸದುಗೌಡ ಪಾಟೀಲ, ರಮೇಶ ಬಗಲಿ, ವೀರನಗೌಡ ನ್ಯಾಮಗೌಡ, ರಮೇಶ ಸೋಮಣ್ಣವರ, ಮಂಜು ಕಣಬೂರಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-72884547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.