ಬೀಳಗಿ: ಡಚ್ ವಿವ್ ಟೆಕ್ನಾಲಜೀಸ್ ಕಂಪನಿಯ ಸಹಾಯದಿಂದ ಬೆಂಗಳೂರಿನ ನಗು ಫೌಂಡೇಶನ್ರವರು ಬೀಳಗಿ ತಾಲ್ಲೂಕಿನ 11 ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀಡಿದ ನೋಟ್ಬುಕ್ಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಫಲಾನುಭವಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿತರಿಸಿದರು.

ಇಲಾಖೆ ಪರವಾಗಿ ನಗು ಫೌಂಡೇಶನ್ ಸ್ಥಾಪಕರಾದ ದೀಪ್ತಿ ಶೇಷಾದ್ರಿ ಅವರಿಗೆ ಅಭಿನಂದನೆ ತಿಳಿಸಿದರು.

ಕೊಪ್ಪ ಎಸ್ಕೆ ಶಾಲೆಯ ಶಿಕ್ಷಕ ಚಂದ್ರು ವೈ.ಎ. ಅವರ ಮನವಿಯ ಮೇರೆಗೆ ನಗು ಫೌಂಡೇಶನ್ರವರು ತಾಲ್ಲೂಕಿನ 11 ಶಾಲೆಗಳ 462 ವಿದ್ಯಾರ್ಥಿಗಳಿಗೆ ತಲಾ 6ರಂತೆ 2,772 ನೋಟ್ಬುಕ್ಗಳನ್ನು ಒದಗಿಸಿದ್ದು ಸಂತಸದ ವಿಷಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸೋಮಶೇಖರ ತಳೇವಾಡ, ನಾನಗೌಡ ಪಾಟೀಲ, ಸಿಾರ್ಪಿ ವಿ.ಎನ್. ಸಾಲಾಪುಪೂರ, ಉರ್ದು ಶಾಲೆಗಳ ಸಿಆರ್ಪಿ ಫಲಾನುಭವಿ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-19-1468879794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.