ಬೀಳಗಿ: ವಿಶ್ವಕರ್ಮ ಸಮಾಜದವರ ಕರಕುಶಲತೆಯು ಜಗತ್ತಿಗೆ ಪ್ರಸಿದ್ಧವಾಗಿದೆ. ಅವರು ಶ್ರಮಿಕ, ಕಾಯಕ ಜೀವಿಗಳಾಗಿದ್ದಾರೆ ಎಂದು ಇಂಗಳೇಶ್ವರ ಬ್ರಹ್ಮಾಂಡಬೇರಿ ಮಠದ ಮಹೇಂದ್ರ ಸ್ವಾಮೀಜಿ ಹೇಳಿದರು.

ಸ್ಥಳೀಯ ಸಿದ್ದೇಶ್ವರ ನಗರದಲ್ಲಿರುವ ಕಾಳಿಕಾಕಮಠೇಶ್ವರ ದೇವಸ್ಥಾನದ ದಶಮಾನೋತ್ಸವ ಹಾಗೂ ಯುಗಾದಿ ಸಂಭ್ರಮ ಸಮಾರಂಭದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಭಾರತೀಯ ಶಿಲ್ಪಕಲೆ ಹಾಗೂ ಪಾರಂಪರಿಕ ಕರಕುಶಲ ವಸ್ತುಗಳ ಚಿತ್ರಕಲೆ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಶಿರೋಳ ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದ ಅಭಿನವ ಎಚ್ಚರ ಸ್ವಾಮೀಜಿ ಮಾತನಾಡಿದರು.

ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ.ಬಡಿಗೇರ ಉಪನ್ಯಾಸ ನೀಡಿ, ವಿಶ್ವಕರ್ಮ ಸಮಾಜದ ಆತ್ಮ ಶಿಲ್ಪಕಲೆ. ಮನುಷ್ಯನ ಸಾಮಾಜಿಕ, ಬೌದ್ದಿಕ, ಸಮಗ್ರ ಬದಲಾವಣೆಗೆ ವಿಚಾರವಾದಿಗಳ ಮಾತುಗಳು ಸಂಜೀವಿನಿ ಇದ್ದಂತೆ ಎಂದರು.

ವಿಜಯಪುರದ ವಾಸುದೇವ ಸೋನಾರ,ವಿಲಾಸ ಸೋನಾರ,ರಾಜೇಂದ್ರ ಸೋನಾರ ಅವರನ್ನು ಸನ್ಮಾನಿಸಲಾಯಿತು.

ಋತ್ವಜರುಗಳಾದ ಬಳ್ಳಾರಿ ವೀರ ರಾಘವ ಶರ್ಮ, ಇಲಕಲ್ಲ ಬಸ್ವಂತಾಚಾರ್ಯ, ಹುಬ್ಬಳ್ಳಿ ಮುಕುಂದಾಚಾರ್ಯ, ಮೈಸೂರು ದಯಾನಂದ ಶರ್ಮ, ಬಳ್ಳಾರಿ ವೀರನಾರಾಯಣ ಶರ್ಮ, ಬೀಳಗಿ ಈರಣ್ಣ ಟಂಕಸಾಲಿ, ಶಂಕರ ಬಡಿಗೇರ, ಕೇಶವ ಬಡಿಗೇರ, ಮೌನೇಶ ಬಡಿಗೇರ (ಅಚನೂರ),ದೇವೆಂದ್ರ ಬಡಿಗೇರ, ವಿನೋದ ಬಡಿಗೇರ,ಕಸ್ತೂರಿ ಪತ್ತಾರ,ವೀಣಾ ಟಂಕಸಾಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-19-1195525831

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.