ಬೀಳಗಿ: ತಾಲ್ಲೂಕಿನಾದ್ಯಂತ ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚುತ್ತಿದ್ದು ಜಲಮೂಲಗಳು ಬತ್ತುತ್ತಿವೆ. ಬಿರು ಬಿಸಿಲಿನ ಬೇಗೆಗೆ ಪಕ್ಷಿ ಸಂಕುಲವೂ ಬಸವಳಿದಿದೆ. ಇದನ್ನರಿತ ಯುವಕರ ಗುಂಪು, ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಮುಂದಿನ ಹತ್ತಾರು ಗಿಡಗಳಿಗೆ ಮಣ್ಣಿನ ಪರ್ಯಾಣ ಕಟ್ಟಿ, ಅವುಗಳಿಗೆ ನಿತ್ಯ ನೀರು ಹಾಕುವ ಮೂಲಕ ನೂರಾರು ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

ಪಟ್ಟಣದ ದರ್ಶನ ಮರಾಠೆ ಹಾಗೂ ಆತಮ ಸ್ನೇಹಿತರು ಮಾಡುತ್ತಿರುವ ಈ ಕಾರ್ಯಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೇಸಿಗೆಯಲ್ಲಿ ಪಕ್ಷಿಗಳು ಕುಡಿಯಲು ನೀರಿಲ್ಲದೆ ಪರದಾಡಬಾರದೆಂದು ಈ ಯುವಕ ಪಣತೊಟ್ಟಿದ್ದಾನೆ.

‘ಮನುಷ್ಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾನೆ. ಆದರೆ, ಪಕ್ಷಿಗಳು ಬಾನ೦ಗಳದಲ್ಲಿ ಹಾರಾಡಿ ಬಸವಳಿದು ನೀರು ಹಾಗೂ ಆಹಾರಕ್ಕಾಗಿ ಪರಿತಪಿಸುತ್ತವೆ. ಅವುಗಳ ರಕ್ಷಣೆಗೆ ನಿರ್ಧರಿಸಿ, ಈ ಕಾರ್ಯ ಮಾಡುತ್ತಿದ್ದೇವೆ. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಆಗಿದೆ’ ಎನ್ನುತ್ತಾರೆ ದರ್ಶನ ಹಾಗೂ ಅವರ ಸ್ನೇಹಿತರು.

‘ಈ ಹಿಂದೆ ಕೆರೆಗಳು, ಹಳ್ಳ–ಕೊಳ್ಳಗಳು, ಸಮೃದ್ಧವಾಗಿದ್ದವು. ಆದರೆ, ನಗರೀಕರಣ ಹಾಗೂ ಮಳೆಯ ಅಭಾವದಿಂದ ಜಲಮೂಲಗಳು ಬರಿದಾಗಿವೆ. ಬಿಸಿಲಿನ ಝಳಕ್ಕೆ ನಿತ್ರಾಣಗೊಳ್ಳುವ ಗುಬ್ಬಿ, ಕಾಗೆ, ಪಾರಿವಾಳ ಸೇರಿದಂತೆ ಅನೇಕ ಪಕ್ಷಿಗಳು ನೆಲಕ್ಕೆ ಬೀಳುತ್ತಿವೆ. ಅವುಗಳ ದಾಹ ತಣಿಸುವ ಕಾಯಕ ನಮ್ಮದಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-19-1221439955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.