ರಾಂಪುರ: ‘ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೂ ಕಾಂಗ್ರೆಸ್ ಸರ್ಕಾರ ಬೀಳದು. ಆದರೆ, 2028ರ ಚುನಾವಣೆಯಲ್ಲಿ ಹಿಂದುತ್ವದ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ದಿಕ್ಷೂಚಿ ಆಗಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬಾಗಲಕೋಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಭಗವತಿ ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡಿದ ಅವರು, ‘ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ಸಿಗೆ ಮನೆಗೆ ಕಳಿಸುವ ಮುನ್ಸೂಚನೆ ನೀಡಿ’ ಎಂದರು.

‘ಇದು ಜಾತಿ ಚುನಾವಣೆ ಅಲ್ಲ. ಹಿಂದುತ್ವ ರಕ್ಷಿಸುವ ಸಂದರ್ಭ. ಹೀಗಾಗಿ ಎಲ್ಲರೂ ಜಾತಿ, ಮತ ಮರೆತು ಒಗ್ಗಟ್ಟಾಗಿ ಮುಂದೆ ಹಿಂದುತ್ವದ ಸರ್ಕಾರ ಸ್ಥಾಪಿಸುವ ಸಂಕಲ್ಪ ಮಾಡಬೇಕಾದ ಅಗತ್ಯವಿದೆ’ ಎಂದ ಯತ್ನಾಳ, ‘ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಪ್ರತಿ ತಿಂಗಳು ₹3 ಸಾವಿರ, ಪುರುಷರಿಗೆ ₹2 ಸಾವಿರ ನೀಡುತ್ತೇವೆ’ ಹೇಳಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿರುವುದನ್ನು ನೋಡಿದರೆ ರಾಜ್ಯದಲ್ಲಿ ತಾಲಿಬಾನ್ ಆಡಳಿತದ ವ್ಯವಸ್ಥೆ ಕಾಣುತ್ತಿದೆ. ಇದಕ್ಕೆ ಕೊನೆಹಾಡುವ ನಿಟ್ಟಿನಲ್ಲಿ ಚರಂತಿಮಠ ಗೆಲ್ಲಿಸಬೇಕು ಎಂದರು.

ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ರಾಜ್ಯದಲ್ಲಿ ಹಿಂದುತ್ವ ಸರ್ಕಾರ ಅಧಿಕಾರಕ್ಕೆ ಬರಬೇಕು. ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಮುಂಬರುವ ಚುನಾವಣೆಗೆ ನಾಂದಿ ಹಾಡಬೇಕು ಎಂದರು. ಮುಖಂಡರಾದ ಮಹಾಂತೇಶ ಮಮದಾಪೂರ, ಕುಮಾರ ಜನಾಲಿ, ಮೋಹನ ಜಾಧವ, ಹಣಮಂತ ಮಾವಿನಮರದ, ರಾಜು ಮುದೇನೂರು, ಹಣಮಂತ ಚಿಮ್ಮಲಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-19-2027031876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.