ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಗೊಳಿಸಿ’

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಹಳಗೆಜೂಗ ಹಿತರಕ್ಷಣಾ ಸಮಿತಿ ಸದಸ್ಯರು
Last Updated 29 ಮಾರ್ಚ್ 2018, 12:40 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಹಳಗೆಜೂಗ ದಡದ ಪಕ್ಕದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಹಳಗೆಜೂಗ ಹಿತರಕ್ಷಣಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಮರಳು ಗಣಿಗಾರಿಕೆ ನಡೆಸಲು ಘಾಡಸಾಯಿಯ ಹಳಗಾದಲ್ಲಿ ಮರಳು ದಿಣ್ಣೆಗಳನ್ನು ಲೀಸ್‌ದಾರರಿಗೆ ಪರವಾನಗಿ ನೀಡಲಾಗಿತ್ತು. ಆದರೆ ಈ ಪ್ರದೇಶವು ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ ಮರಳು ಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಹೀಗಾಗಿ ಕಾಳಿ ನದಿಯ ಎರಡು ಗುಂಟೆ ಅಕ್ರಮವಾಗಿ ಹಗಲು ರಾತ್ರಿ ಎನ್ನದೇ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ’ ಎಂದು ದೂರಿದರು.

‘ಇಲ್ಲಿರುವ ಕೃಷಿ ಜಮೀನುಗಳು ಈ ಗಣಿಕಾರಿಗಳಿಂದ ಕುಸಿದು, ಅಲ್ಲಿ ಉಪ್ಪು ನೀರು ನುಗ್ಗಲು ಆರಂಭಿಸಿದೆ. ಈ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲಾಗುತ್ತಿದ್ದು, ಕಾಲವಾ, ಕೊಂಡಿ, ತೀಸರೆ ಮುಂತಾದ ಅಪರೂಪದ ಜಲಚರಗಳು ನಶಿಸುತ್ತಿವೆ’ ಎಂದು ತಿಳಿಸಿದರು.

‘ಈಗಾಗಲೇ ಮರಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸರು, ಬಂದರು ಮತ್ತು ಒಳನಾಡು ಜಲಸಾರಿಗೆ, ಮೀನುಗಾರಿಕೆ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ತಾವು ನಡೆಸಿದ ಸಭೆ ನಡವಳಿಕೆಯ ಪ್ರಕಾರ ಕಾಳಿ ನದಿ, ರೈಲು ಸೇತುವೆಯಿಂದ 22 ಕಿ.ಮೀ. ದೂರದಲ್ಲಿ ಅಂದರೆ ಉಳಗಾದ ಮೇಲ್ಭಾಗದಲ್ಲಿ ಮರಳು ತೆಗೆಯಲು ಆದೇಶಿಸಲಾಗಿದೆ. ಸರ್ವೇ ನಂ.181 ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹೀಗಾಗಿ ಅನಧಿಕೃತವಾಗಿ ನಡೆಯುವ ಚಟುವಟಿಕೆಗಳಿಗೆ ತಡೆಯೊಡ್ಡಬೇಕು’ ಎಂದು ಮನವಿ ಮಾಡಿದರು.

ಹಿತರಕ್ಷಣಾ ಸಮಿತಿ ಸದಸ್ಯರಾದ ಮಹಾಬಲೇಶ್ವರ ಶಂಕರ ನಾಯ್ಕ, ಸಂದೀಪ ನಾಯ್ಕ, ಶಶಿಕಾಂತ ಕೇಶವ ನಾಯ್ಕ, ರಾಮದಾಸ ನಾಯ್ಕ, ಸುಧಾಕರ ಕೊಠಾರಕರ್, ರಾಜನ್ ಕೊಠಾರಕರ್, ಸುಭಾಷ ಕೊಠಾರಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT