ಹಾನಾಪುರದಲ್ಲಿ ಸ್ವಚ್ಚತಾ ಕಾರ್ಯ

7

ಹಾನಾಪುರದಲ್ಲಿ ಸ್ವಚ್ಚತಾ ಕಾರ್ಯ

Published:
Updated:
ಗುಳೇದಗುಡ್ಡ ಬಳಿಯ ಹಾನಾಪುರ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.

ಗುಳೇದಗುಡ್ಡ: ‘ನಾವು ವಾಸಿಸುವ ಗ್ರಾಮದ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಮನೆಯ ಸುತ್ತಲಿನ ಪರಿಸರ ಶುಚಿಯಾಗಿಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು’ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟಕ ಶಂಕರ ಹೂಗಾರ ಹೇಳಿದರು.

ಸೋಮವಾರ ಹಾನಾಪುರ ಎಸ್.ಪಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಕೂಲಿ ಕಾರ್ಮಿಕ ಸಂಘ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. 350ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ಗ್ರಾಮದ ಶಾಲೆ, ಗ್ರಾಮ ಪಂಚಾಯ್ತಿ ಆವರಣ, ದೇವಸ್ಥಾನ ಆವರಣ ಮತ್ತು ಪ್ರಮುಖ ರಸ್ತೆ, ಗಟಾರಗಳನ್ನು ಸ್ವಚ್ಛ ಮಾಡಿದರು. ಯಮುನಪ್ಪ ಹೂಗಾರ, ಬಸವ್ವ ದುರಗದ, ಪುಂಡಲೀಕ ನಾಯಕ, ಫಕೀರಪ್ಪ ಗೌಡರ, ಭೀಮಪ್ಪ ಗೌಡರ, ಸಿದ್ದಪ್ಪ ಹಿರೇಗೌಡರ, ಶಾಂತವ್ವ ರಾಠೋಡ, ಶಾರವ್ವ ಬಾಲನ್ನವರ, ವಿಜಯಲಕ್ಷ್ಮಿ ಹೂಗಾರ, ಮಂಜವ್ವ ಕಂಬಳಿ, ನೇಮಣ್ಣ ಮುಂದಿನಮನಿ, ಪಾಂಡಪ್ಪ ರಾಠೋಡ, ಪಿಡಿಒ ರಾಮಚಂದ್ರ ಮೇತ್ರಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !