ಬುಧವಾರ, ಜನವರಿ 20, 2021
29 °C

ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ: ಎಂ.ಟಿ.ಬಿ.ನಾಗರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

MTB Nagaraj

ಬಾಗಲಕೋಟೆ: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಚರ್ಚೆ ಎಲ್ಲೂ ನಡೆದಿಲ್ಲ. ಅವಧಿ ಮುಗಿಯುವವರೆಗೂ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಂ.ಟಿ.ಬಿ.ನಾಗರಾಜ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ವಲಸಿಗರು, ಮೂಲ ಎಂಬ ಪ್ರಶ್ನೆ ಇಲ್ಲ. ನಾವೆಲ್ಲ ಬಿಜೆಪಿ ಪಕ್ಷಕ್ಕೆ ಸೇರಿದ್ದೇವೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೂ ನಮ್ಮ ಬಗ್ಗೆ ಅಭಿಮಾನ ಜಾಸ್ತಿ. ಹೀಗಾಗಿ ಕೆಲವೊಮ್ಮೆ ಅವರು ಮಾತಾಡುವಾಗ ಶಬ್ದಗಳು ತಪ್ಪಿ ಪ್ರಮಾದ ಆಗಿರುತ್ತೆ. ಆ ಬಗ್ಗೆ ನಮಗೇನು ಬೇಸರ ಇಲ್ಲ ಎಂದರು.

ಬೆಂಗಳೂರಿನಲ್ಲಿ ಶನಿವಾರ ನಾವು ಮಾಡಿದ್ದ ಸಭೆಯಲ್ಲಿ ಏನೂ ವಿಶೇಷ ಇರಲಿಲ್ಲ. ಸರ್ಕಾರದ ವಿಚಾರದ ಪ್ರಸ್ತಾಪ ಅಲ್ಲಿ ನಡೆದಿಲ್ಲ. ನಮ್ಮನ್ನು ಮಂತ್ರಿ ಮಾಡಬೇಕಿತ್ತು. ವಿಳಂಬವಾಗಿದೆ.

ಸಂಪುಟ ವಿಸ್ತರಣೆ ವಿಳಂಬ ಆಗಲಿದೆ ಎಂದು ಸಿ.ಎಂ ಯಡಿಯೂರಪ್ಪ ಅವರೇ ಹೇಳಿದ ಮೇಲೆ ಅದೇನಾಗುತ್ತೋ ಅಂತ ನಾವು ಕಾಯಬೇಕು. ಮಂತ್ರಿ ಮಾಡ್ತೇವೆ, ಮಾಡ್ತೇವೆ ಅಂದಿದ್ದಾರೆ. ಕೆಲವೇ ದಿನಗಳಲ್ಲಿ ಆ ಸಂದರ್ಭ ಒದಗಿಬರಲಿದೆ ಎಂದು ಎಂಟಿಬಿ ನಾಗರಾಜ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು