7
-

ಕಾಲೇಜು ಅಧ್ಯಾಪಕರ ಸಂಘ: ಬಿ.ಜಿ.ಭಾಸ್ಕರ್ ಅಧ್ಯಕ್ಷ

Published:
Updated:
ಬಾಗಲಕೋಟೆಯಲ್ಲಿ ಶನಿವಾರ ನಡೆದ ರಾಜ್ಯ ವಿಶ್ವ ವಿದ್ಯಾಲಯಗಳ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಬಿ.ಜಿ.ಭಾಸ್ಕರ್ (ಎಡದಿಂದ ನಾಲ್ಕನೆಯವರು) ಅವರಿಗೆ ಹಿಂದಿನ ಅಧ್ಯಕ್ಷ ನಿರಂಜನ ಸಂಗಾಪುರ (ಎಡದಿಂದ ಎರಡನೆಯವರು) ಅಧಿಕಾರ ಹಸ್ತಾಂತರಿಸಿದರು. ಚಿತ್ರದಲ್ಲಿ ಡಾ.ಸಿ.ಆರ್‌.ರಾಜು, ಡಾ.ಚಂದ್ರಶೇಖರ ಪಾಟೀಲ, ಡಾ.ಎಂ.ಬಿ.ಹೆಗ್ಗಣ್ಣವರ ಚಿತ್ರದಲ್ಲಿದ್ದಾರೆ.

ಬಾಗಲಕೋಟೆ: ರಾಜ್ಯ ವಿಶ್ವ ವಿದ್ಯಾಲಯಗಳ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಇಲ್ಲಿ ನಡೆದ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಹಾಗೂ ಅಲ್ಲಿನ ಬೆಂಗಳೂರಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಜಿ.ಭಾಸ್ಕರ್ ಗೆಲುವು ಸಾಧಿಸಿದರು.

ಪ್ರತಿಸ್ಪರ್ಧಿ ಡಾ.ಟಿ.ಎಂ.ಮಂಜುನಾಥ ಅವರಿಗಿಂತ ಎರಡು ಮತ ಹೆಚ್ಚು ಪಡೆದ ಭಾಸ್ಕರ್ ವಿಜಯದ ನಗೆ ಬೀರಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ರಾಯಚೂರು ಜಿಲ್ಲೆ ಲಿಂಗಸೂರಿನ ಡಾ.ಚಂದ್ರಶೇಖರ ಪಾಟೀಲ ಆಯ್ಕೆಯಾದರು. ಪ್ರತಿ ಸ್ಪರ್ಧಿ ಡಾ.ಸಿ.ಆರ್.ರಾಜು ವಿರುದ್ಧ 13 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಖಜಾಂಚಿ ಸ್ಥಾನಕ್ಕೆ ಬೆಳಗಾವಿ ಜಿಲ್ಲೆ ಕೆಎಲ್‌ಇ ಶಿಕ್ಷಣ ಸಂಸ್ಥೆ ಕಾಲೇಜಿನ ಡಾ.ಎಂ.ಬಿ.ಹೆಗ್ಗಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿನ ಬಿ.ವಿ.ವಿ ಸಂಘದ ಸಭಾಂಗಣದಲ್ಲಿ ಒಕ್ಕೂಟದ ಸರ್ವಸಾಧಾರಣಾ ಸಭೆ, ಶೈಕ್ಷಣಿಕ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !